ರಾಯಚೂರು: ನ. 15ರ ವರೆಗೆ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ
ರಾಯಚೂರು,ಅ.07:- ಕೇಂದ್ರ ಸರ್ಕಾರದ “ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ,” ಕಾಲುಬಾಯಿ ರೋಗ ಸಾಮೂಹಿಕ ಲಸಿಕಾ ಕಾರ್ಯಕ್ರಮ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿ (ಕೆ.ಎಂ.ಎಫ್) ವತಿಯಿಂದ ಅ.2 ರಿಂದ ನವೆಂಬರ್ 15ರ ವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ.
ಇಲಾಖೆಯ ಅಧಿಕಾರಿ/ಸಿಬ್ಬಂದಿ ತಮ್ಮ ಗ್ರಾಮಗಳಿಗೆ ಲಸಿಕೆ ಹಾಕಲು ಬಂದಾಗ ಎಲ್ಲಾ ರೈತ ಬಾಂಧವರು ತಮ್ಮಲ್ಲಿರುವ 3 ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸಿಕೊಂಡು ಈ ಸಾಂಕ್ರಾಮಿಕ ರೋಗದಿಂದಾಗುವ ಆರ್ಥಿಕ ನಷ್ಟವನ್ನು ತಪ್ಪಿಸಬೇಕು. ಜಾನುವಾರು ಮಾಲೀಕರು ರಾಸುಗಳಿಗೆ ಕಡ್ಡಾಯವಾಗಿ ಕಿವಿ ಓಲೆ ಹಾಕಿಸಿ ಅಗತ್ಯ ಮಾಹಿತಿಯನ್ನು ಇಲಾಖೆಯ ಅಧಿಕಾರಿ/ ಸಿಬ್ಬಂದಿಯವರಿಗೆ ನೀಡಬೇಕು.
ಎಲ್ಲರೂ ಸಹಕರಿಸಿ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು, ಗ್ರಾಮಗಳಲ್ಲಿ ಲಸಿಕೆ ಹಾಕುವ ದಿನಾಂಕ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯವರು ನೀಡಲಿದ್ದಾರೆಂದು ಜಿಲ್ಲಾ ನಿರ್ವಹಣಾ ಸಮಿತಿ ಉಪನಿರ್ದೇಶಕರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




