Crime

ಉತ್ತರ ಕನ್ನಡ ಕರಾವಳಿಯಲ್ಲಿ ಗುಡುಗು ಸಹಿತ ಮಳೆ

ಚಿತ್ರ: ಕಾರವಾರ ಬಂದರು ಬೈತಖೋಲ್ ದಲ್ಲಿ ಕಂಡ ದೃಶ್ಯ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಂಜೆ ಸಿಡಿಲು ಗುಡುಗು ಸಹಿತ ಮಳೆ ಸುರಿಯಿತು‌ .ಜೋರಾದ ಗಾಳಿ ಸಹಿತ ಅರ್ದ ಗಂಟೆ ಮಳೆ ಸುರಿಯಿತು. ಸಂಜೆ ನಾಲ್ಕು ಗಂಟೆಗೆ ಒಮ್ಮೆಗೆ ಕತ್ತಲು ಕವಿದ ವಾತಾವರಣದ ಜೊತೆ ಜೋರಾದ ಗಾಳಿ ಬೀಸಿತು. ಸಿಡಲು ಗುಡುಗು ಆರ್ಭಟದ ನಂತರ ಅರ್ದಗಂಟೆ ಮಳೆ ಸುರಿಯಿತು‌.


ಕಾರವಾರ, ಅಂಕೋಲಾ, ‌ಕುಮಟಾ, ಹೊನ್ನಾವರದಲ್ಲಿ ಮಳೆ ಸುರಿದಿದೆ‌ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಘಟ್ಟದ ಮೇಲಿನ ತಾಲೂಕುಗಳಲ್ಲಿ ಸಹ ಅಲ್ಲಲ್ಲಿ ತುಂತುರು ಹಾಗೂ ಸಣ್ಣ ಮಳೆಯಾಗಿದೆ.


ನಾಳೆ ಬುಧವಾರ ಜೋರಾದ ಗಾಳಿ ಸಹಿತ ಮಳೆ ಬೀಳಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಗುಡುಗು ಸಹಿತ ಮಳೆ ಯಾವ ಕ್ಷಣದಲ್ಲೂ ಬರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಯಲ್ಲೋ ಅಲರ್ಟ ಘೋಷಿಸಲಾಗಿದ್ದು, ರಭಸದ ಮಳೆ ಲಕ್ಷಣಗಳು ಇವೆ. ಪೂರ್ವ ಬಂಗಾಳದಲ್ಲಿ ವಾಯು ಭಾರ ಕುಸಿತ ಚೆನ್ನೈ ನಲ್ಲಿ ಮಳೆ ತಂದಂತೆ ಪಶ್ಚಿಮ ಕರಾವಳಿಯ ಮೇಲೆ ಸಹ ಪರಿಣಾಮ ಬೀರಿದೆ. ಹಾಗಾಗಿ ಮಳೆಯು ಆಗಾಗ ಬೀಳಲಿದ್ದು, ಮೋಡ ಕವಿದ ವಾತಾವರಣವು ಇರಲಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.‌
….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button