Uttara Kannada

ಕಾಳಿ ಸೇತುವೆ ಅವಶೇಷ ಮೇಲೆತ್ತುವ ಕಾರ್ಯಕ್ಕೆ ಚಾಲನೆ

ಕಾರವಾರ :ಕಳೆದ ಅಗಸ್ಟ ೬ ರಂದು ರಾತ್ರಿ ಕುಸಿದು ಬಿದ್ದಿದ್ದ ಕಾರವಾರದ ಕಾಳಿ ನದಿಯ ಹಳೆಯ ಸೇತುವೆ ಅವಶೇಷ ಮೇಲೆತ್ತುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈಗಾಗಲೇ ಎರಡು ಬಾರ್ಜ , ಕ್ರೇನ್ ಹಾಗೂ ಟಗ್ ಬಂದಿವೆ. ಇನ್ನೊಂದು ದೊಡ್ಡ ಬಾರ್ಜ ಬರುವುದಿದೆ. 90 ದಿನಗಳಲ್ಲಿ ಹಳೆಯ ಸೇತುವೆ ಅವಶೇಷ ಮೇಲೆತ್ತುವ ಗುರಿ ಹೊಂದಲಾಗಿದೆ. ನಂತರ ಹಳೆಯ ಸೇತುವೆಯ ಜಾಗದಲ್ಲಿ ಹೊಸ ಸೇತುವೆ ತಲೆ ಎತ್ತಿ ನಿಲ್ಲಲಿದೆ.

ಕಾಳಿ ಸೇತುವೆಯ ಹಿನ್ನೊಟ :1972 ರಲ್ಲಿ ಗ್ಯಾಮನ್ ಇಂಡಿಯಾಗೆ ನಿರ್ಮಾಣದ ಹೊಣೆ ಹೊತ್ತಿತು.
ಲೋಕೋಪಯೋಗಿ ಹೆದ್ದಾರಿ ವಿಭಾಗವು ಟೆಂಡರ್‌ ಆಹ್ವಾನಿಸಿತು.1972 ರಲ್ಲಿ ಗ್ಯಾಮನ್ ಇಂಡಿಯಾ ಲಿಮಿಟೆಡ್ ಸೇತುವೆಯನ್ನು 1.4 ಕೋಟಿ ರೂ. ವೆಚ್ಚದಲ್ಲಿ, 5 ವರ್ಷದಲ್ಲಿ ನಿರ್ಮಿಸಲು ಒಪ್ಪಿಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹೆದ್ದಾರಿ ವಿಭಾಗ ಗ್ಯಾಮನ್ ಇಂಡಿಯಾಕ್ಕೆ ಆರು ವರ್ಷಗಳ ಕಾಲ ಕಾಮಗಾರಿ ಮಾಡಲು ಅವಧಿ ವಿಸ್ತರಿಸಿತು. ಆದರೂ ಕಾಮಗಾರಿ ಮುಗಿಯಲಿಲ್ಲ.

ರಾಷ್ಟ್ರೀಯ ಹೆದ್ದಾರಿಗಳ
ಮುಖ್ಯ ಎಂಜಿನಿಯರ್ ನಾರಾಯಣ ಮಧ್ಯ ಪ್ರವೇಶಿಸಿ 1982 ರ ವೇಳೆಗೆ ಸೇತುವೆಯನ್ನು ಪೂರ್ಣಗೊಳಿಸುವುದಾಗಿ ಹೇಳಿದರು.
ಕಾಳಿ ನದಿಗೆ ಸೇತುವೆ ನಿರ್ಮಾಣ ಆ ಕಾಲಕ್ಕೆ ಅಷ್ಟು ತೊಡಕಿನದಾಗಿತ್ತು.

ಕಾಳಿ ನದಿಯ ಸೇತುವೆ ಜಾಗ ಅರಬ್ಬೀ ಸಮುದ್ರ ಹಾಗೂ ಕಾಳಿ ನದಿಯ ಸಂಗಮ ಸ್ಥಾನವಾಗಿತ್ತು . ಸೇತುವೆ ನಿರ್ಮಾಣದ ಮುಖ್ಯ ಸಮಸ್ಯೆ ಅದರ ಅಡಿಪಾಯವನ್ನು ಹಾಕುವುದು. ನದಿಯು 80 ಅಡಿಗಳಷ್ಟು ಆಳವಾಗಿರುವುದರಿಂದ ಅದರ ಪಿಲ್ಲರ್‌ಗಳ ಅಡಿಪಾಯವನ್ನು ಹಾಕಲು”ತೆರೆದ-ಗ್ರಾಹಿಂಗ್”ವಿಧಾನವನ್ನು ಅಳವಡಿಸಿಕೊಳ್ಳಬೇಕಾಯಿತು.

ಈ ವಿಧಾನದಲ್ಲಿ 36 ಅಡಿ ವ್ಯಾಸದ ಬಾವಿಗಳನ್ನು ನದಿಯ ತಳದ ಸ್ತರವನ್ನು ತಲುಪುವವರೆಗೆ ತೋಡಲಾಗಿತ್ತು. ಎರಡು ಪಿಲ್ಲರ್ ಗಳ ಭಾಗದಲ್ಲಿ ಗಟ್ಟಿ ಬಂಡೆ ಸಿಗದೆ ಅದು ಸಹ ವಿಫಲವಾಗಿತ್ತು. ಕೊನೆಗೆ ದುಬಾರಿ ಮತ್ತು ಅಪಾಯಕಾರಿ ನ್ಯೂಮ್ಯಾಟಿಕ್ ಸಿಂಕಿಂಗ್ ವಿಧಾನಕ್ಕೆ ಬದಲಾಯಿಸಿ ಅಡಿಪಾಯ ಹಾಕಲಾಯಿತು. ಈ ವೇಳೆ ಏಳು ಜನ ಕಾರ್ಮಿಕರು ಮೃತಪಟ್ಟಿದ್ದರು.

ಸೇತುವೆ ನಿರ್ಮಿಸಲು ನ್ಯೂಮ್ಯಾಟಿಕ್ ವಿಧಾನವನ್ನು ಅಳವಡಿಸಿಕೊಂಡದ್ದು ದೇಶದಲ್ಲಿ ಮೊದಲಾಗಿತ್ತು.
ಜಪಾನ್ ತಂತ್ರಜ್ಞಾನ ಸಹಾಯ ಪಡೆದು ಸೇತುವೆ ನಿರ್ಮಾಣ ಮಾಡಲಾಗಿತ್ತು.

1983 ರಲ್ಲಿ ದೇಶಕ್ಕೆ ಸಮರ್ಪಣೆ :
665.5 ಮೀಟರ್ ಉದ್ದದ ಸೇತುವೆಯನ್ನು ಕೊನೆಗೂ ನಿರ್ಮಿಸಿ ,1983 ರಲ್ಲಿ ದೇಶಕ್ಕೆ ಸಮರ್ಪಿಸಲಾಯಿತು. ಲೋಕೋಪಯೋಗಿ ಮಂತ್ರಿಯಾಗಿ ದೇವೇಗೌಡರು , ಕೇಂದ್ರದ ಲೋಕೋಪಯೋಗಿ ಸಚಿವರು ಕಾರವಾರಕ್ಕೆ ಬಂದು ಸೇತುವೆ ಉದ್ಘಾಟಿಸಿದ್ದರು.
….

…….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button