
Uttara KannadaAccident News
ಕಾರವಾರದಲ್ಲಿ ಕಾರ್ ಗೆ ಬೆಂಕಿ
ಕಾರವಾರ: ನಗರದ ಪಿಕಳೆ ರಸ್ತೆಯಲ್ಲಿ ಕಾರ್ ಪಾರ್ಕಿಂಗ್ ಜಾಗದಲ್ಲಿದ್ದ ಕಾರ್ ಗೆ ಹಠಾತ್ ಬೆಂಕಿ ಹೊತ್ತಿದ ಘಟನೆ ನಡೆದಿದೆ.
ಕಾರ್ ಗೆ ಬೆಂಕಿ ಕಂಡು ಜನರು ಗಾಬರಿಯಾದರು. ಕಾರ್ ಗೆ ಬ್ಯಾಟರಿ ಶಾರ್ಟ ಸರ್ಕ್ಯೂಟ್ ನಿಂದ ಅಥವಾ ಇನ್ನಾವುದೋ ಕಾರಣದಿಂದ ಬೆಂಕಿ ಹತ್ತಿರಬಹುದು ಎಂದು ಶಂಕಿಸಲಾಗಿದೆ.ಕಾರ್ ನಲ್ಲಿ ಯಾರೂ ಇರಲಿಲ್ಲ. ಗೋವಾ ರಾಜ್ಯದ ನೊಂದಣಿ ಸಂಖ್ಯೆ ಕಾರ್ ಗೆ ಇದೆ. ಕಾರ್ ಮಾಲಕರು ಪಾರ್ಕಿಂಗ್ ನಂತರ ಮಾರ್ಕೆಟ್ ಕೆಲಸಕ್ಕೆ ಹೋಗಿರಬಹುದು ಎಂದು ಊಹಿಸಲಾಗಿದೆ. ಆಗ್ನಿಶಾಮಕದಳದವರು ಕಾರ್ ಗೆ ಹತ್ತಿದ ಬೆಂಕಿ ನಂದಿಸಿದ್ದಾರೆ.
….




