Madikeri

ಮನುಷ್ಯ ಸಂಬಂಧಗಳು ಅಂಚೆ ಪಟ್ಟಿಗೆ ಕಾಗದಗಳಂತೆ ಮಾರ್ಪಾಡಾಗಿದೆ;ಸೌಹಾರ್ದ ವಾತಾವರಣಗಳನ್ನು ಸೃಷ್ಟಿಸುವ ಕಾರ್ಯಕ್ರಮಗಳು, ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ – ಮೌ.ಯು ಅಬ್ದುಲ್ ಸಲಾಮ್

ಜಗತ್ತು ಗ್ಲೋಬಲ್ ವಿಲೇಜ್ ನಂತೆ ಮಾರ್ಪಾಡಾಗಿದೆ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ .ವಿದೇಶಗಳಿಗೆ ತೆರಳುತ್ತಾರೆ, ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಬಹಳ ಸುಲಭವಾಗಿ ತೆರಳುತ್ತಾರೆ ಇದರಿಂದ ಅಂತರ ಬಹಳ ಕಡಿಮೆಯಾಗಿದೆ,ಆದರೆ ದುರದೃಷ್ಟವಶಾತ್
ಮನುಷ್ಯರ ಅಂತರ ದಿನದಿಂದಕ್ಕೆ ಹೆಚ್ಚಾಗುತ್ತಿದೆ, ಪರಸ್ಪರ ಅನುಮಾನ ಅಪನಂಬಿಕೆ,ಹಾಗೂ ದ್ವೇಷವನ್ನು ಹರಡಲಾಗುತ್ತಿದೆ ಇಂದು ಮನುಷ್ಯ ಸಂಭಂದಗಳು ಅಂಚೆ ಪಟ್ಟಿಗೆ ಕಾಗದಗಳಂತೆ ಮಾರ್ಪಾಡಾಗಿದೆ ಇಂತಹ ಸಂಧರ್ಭದಲ್ಲಿ ಇಂತಹ ಸೌಹಾರ್ದ ವಾತಾವರಣಗಳನ್ನು ಸೃಷ್ಟಿಸುವ ಕಾರ್ಯಕ್ರಮಗಳು, ಮನುಷ್ಯ ಸಂಭಂದಗಳನ್ನು ಗಟ್ಟಿಗೊಳಿಸುತ್ತದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಸಂಚಾಲಕ. ಮೌ| ಯೂ ಅಬ್ದುಲ್ ಸಲಾಮ್ ರವರು ಹೇಳಿದರು.

ಅವರು ಮಡಿಕೇರಿಯ.ರಾಜದರ್ಶನ್ ಹೊಟೆಲ್ ಸಭಾಂಗಣದಲ್ಲಿ ನಡೆದ ಕುಂದುರು ಮೊಟ್ಟೆ ದೇವಸ್ಥಾನ ದಸರಾ ಉತ್ಸವ ಸಮಿತಿ ದಸರಾ ಸುವರ್ಣ ಮಹೋತ್ಸವದ ದಶಮಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು
ಅರಮೇರಿ ಕಳಂಚೇರಿ ಮಠದ ಮಠಾದೀಶರಾದ ಶ್ರೀ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ. ಸ್ವಾಮೀಜಿ, ಮಾತನಾಡಿ ಬದಲಾವಣೆಯ ಈ. ಕಾಲದಲ್ಲಿ ಆಧುನಿಕತೆಯ ಹೆಸರಿನಲ್ಲಿ ಧಾರ್ಮಿಕ ಆಚರಣೆಗಳಿಗೆ ದಕ್ಕೆ ಆಗಬಾರದು, ನಂಬಿಕೆ , ಆಚರಣೆಗಳು ಪದ್ದತಿಗಳು ನಿರಂತರವಾಗಿ ನಡರಯಬೇಕಿದೆ,ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವುದರೊಂದಿಗೆ ಆಧ್ಯಾತ್ಮಿಕತೆಯು ಈ ದೇಶದ ಅಶ್ಮಿತೆ ಯಾಗಿದೆ ಎಂದು ಪ್ರತಿಪಾದಿಸಿದರು.

ಜೀವ ತೆಗೆಯುವುದು ಅಧರ್ಮ, ಜೀವ ಉಳಿಸುವುದು ಧರ್ಮ, ಧರ್ಮ ಏಂಬುದು ಮನುಷ್ಯ ಬದುಕನ್ನು ರೂಪಿಸುವುದಾಗಿದೆ ಎಂದು ಮಡಿಕೇರಿ ಸಂತ ಮೈಕಲರ ಶಾಲೆಯ ಧರ್ಮಾಧಿಕಾರಿಗಳಾದ ರೆವಲಂಟ್ ಫಾದರ್ ಜಾರ್ಜ್ ದೀಪಕ್ ಹೇಳಿದರು ದಸರಾ ಸಮಿತಿ ಅಧ್ಯಕ್ಷ ರವಿ ಕರ್ಕೇರಾ ಅಧ್ಯಕ್ಷತೆ ವಹಿಸಿದ್ದ.ಸಮಾರಂಭದಲ್ಲಿ ಪತ್ರಕರ್ತ ಜಿ.ರಾಜೇಂದ್ರ, ಟಿ.ಪಿ ರಮೇಶ್ ಮಾಜಿ ಎಂ ಎಲ್ ಸಿ ಸುನಿಲ್ ಸುಬ್ರಹ್ಮಣಿ,ಹಾಗೂ ಡಾ| ಹೆಚ್ ವಿ ದೇಚದಾಸ್ ಶುಭಹಾರೈಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸಮಿತಿಯಲ್ಲಿ ದುಡಿದವರಿಗೆ ಸನ್ಮಾನ ಮಾಡಲಾಯಿತು.

IMG 20250129 WA0009 Madikeri

IMG 20250129 WA0010 Madikeri

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button