
Featured StoryUttara Kannada
ಅಡಿಕೆ ಕದ್ದವನ ಬಂಧನ
ಕಾರವಾರ : ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಗ್ರಾಮದ ಮಾರುತಿ ಗಲ್ಲಿಯಲ್ಲಿ ನಾಗರಾಜ ಗೌಡರ ಮನೆಯಿಂದ ಇದೇ ಫೆ.5ರ ರಾತ್ರಿ ಸುಮಾರು 45 ಕೆಜಿ ಅಡಿಕೆ ಕಳ್ಳತನ ಮಾಡಿದ್ದ ಅರೋಪಿ ಕೋಲಸಿರ್ಸಿ ಗುಡ್ಡೆಕೇರಿಯ ಕಾಶಿನಾಥ ಕೃಷ್ಣ ನಾಯ್ಕ ಎಂಬಾತನನ್ನು ಪೋಲಿಸರು ಕದ್ದ ಅಡಿಕೆ ಸಹಿತ ಬಂಧಿಸಿದ್ದಾರೆ
ಮನೆಯ ಅಂಗಳದಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕಳ್ಳತನವಾದ ಬಗ್ಗೆ , ಸಿದ್ದಾಪುರದ ನಾಗರಾಜ ಗೌಡ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಾಗಿತ್ತು.
ಎಸ್ಪಿ ನಾರಾಯಣ, ಮಾರ್ಗದರ್ಶನ ಡಿವೈಎಸ್ಪಿ ಗಣೇಶ ಕೆ .ಎಲ್. ಮತ್ತು ಜೆ. ಬಿ. ಸೀತಾರಾಮ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐಗಳಾದ ಅನಿಲ ಬಿ.ಎಂ, ಗೀತಾ ಸಿರ್ಸಿಕರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.




