Crime

ಸಮುದ್ರತೀರದಲ್ಲಿ ಮೀನು ಹಿಡಿಯುವ ಸ್ಪರ್ಧೆ

ಬ್ಯುರೋ ವರದಿ

ಕಾರವಾರ : ಇಲ್ಲಿನ ಬೈತಖೋಲದ ಬ್ರೇಕ್ ವಾಟರ್ ಅರಬ್ಬೀ ಸಮುದ್ರದ ಗಂಗೇಕೊಳ್ಳದ ಬಳಿ ಯುವ ಮೀನುಗಾರರ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಈ ಸ್ಪರ್ಧೆಯಲ್ಲಿ ಬೇಳೂರಿನ ತಿಲಕ ಗೌಡ ೫೦ ಮೀನು ಹಿಡಿಯುವ ಮೂಲಕ ಮೊದಲ ಸ್ಥಾನ , ಗಣೇಶ ಗುನಗಿ 36 ಮೀನು ಹಿಡಿಯುವ ಮೂಲಕ ಎರಡನೇಯ ಸ್ಥಾನ ಹಾಗು ನಿರಂಜನ ಗೌಡ ಬಿಣಗಾ 30 ಮೀನು ಹಿಡಿಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಮೀನು ಹಿಡಿಯುವ ಸ್ಪರ್ಧೆ
ಒಂದು ಒಳ್ಳೆಯ ಕಾರ್ಯಕ್ರಮ ಎಂದರು. ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಒಂದು ಅದ್ಭುತ ಸ್ಪರ್ಧೆಯಾಗಿದ್ದು, ಯುವಕರಿಗೆ ಒಂದು ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ಎಂದರು.

ಗಾಳ ಹಾಕುವ ಸ್ಪರ್ಧೆಗೆ ಚಾಲನೆ ನೀಡಿದ ನಗರಸಭಾ ಅಧ್ಯಕ್ಷ ರವಿರಾಜ ಅಂಕೋಲೆಕರ್ ಮಾತನಾಡಿ, ಮಳೆಗಾಲದಲ್ಲಿ ನಾವೂ ಸಹ ಗಾಳ ಹಾಕಿ ಮೀನು ಹಿಡಿಯಲು ತೆರಳುತ್ತಿದ್ದೆವು. ಇವತ್ತು ಈ ಕಾರ್ಯಕ್ರಮ ಕೇವಲ ಕಾರ್ಯಕ್ರಮವಾಗಿ ಉಳಿಯಬಾರದು. ಹೊರರಾಜ್ಯಗಳಿಂದಲೂ ಸಹ ಸ್ಪರ್ಧೆಗಳು ಆಗಮಿಸಿರುವುದು ಖುಷಿಯ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಕಾರ್ಯಕ್ರಮ ಮುಂದುವರೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಮಾತನಾಡಿ, ಬೈತಖೋಲ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಮತ್ತೆ ನೋಟೀಸ್ ನೀಡಿದಲ್ಲಿ ನಾವೆಲ್ಲರೂ ಜನರೊಂದಿಗೆ ನಿಂತು ಹೋರಾಟ ಮಾಡುತ್ತೇವೆ. ಸರ್ಕಾರ ಯಾವುದೂ ಇರಲಿ, ನಮ್ಮದೇ ಸರ್ಕಾರವಾದರೂ ನಾನು ಎಂದಿಗೂ ಜನಪರವಾಗಿದ್ದೇನೆ. ಪಕ್ಷಾತೀತವಾಗಿ ನಾವೆಲ್ಲರೂ ಹೋರಾಟದಲ್ಲಿ ಭಾಗಿಯಾಗೋಣ ಎಂದರು.
IMG 20250209 WA0053 Crime

IMG 20250209 WA0051 Crime

ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯಲ್ಲಿ ಕಾರವಾರ, ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಭಟ್ಕಳ ಸೇರಿದಂತೆ ಮಂಗಳೂರು, ಪೂಣೆ ಭಾಗಗಳಿಂದಲೂ ಸಹ ಸುಮಾರು 47ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.
…

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button