Uttara Kannada

ಕಾರವಾರ ನಗರಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಾರವಾರ : ಲಂಚ ಪಡೆಯುವ ವೇಳೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕಾರವಾರ ನಗರ ಅಭಿವೃದ್ಧಿ ಪ್ರಾಧಿಕಾರದ ಯೋಜಕ ಸದಸ್ಯ ಶಿವಾನಂದ ತಾಮ್ರೆಣ್ಣನವರ ಬಲೆಗೆ ಬಿದ್ದ ಅಧಿಕಾರಿ. ಕಾರವಾರ ನಗರಾಭಿವೃದ್ಧಿ ಕಚೇರಿಯಲ್ಲಿ ಅಪರಾಹ್ನ ಈ ದಾಳಿ ನಡೆದಿತ್ತು ‌‌.

ಟೌನ್ ಪ್ಲಾನಿಂಗ್ ಪ್ಲಾಟ್ ಒಂದರ ಯೋಜನೆ ಅನುಮೋದನೆಗೆ
10 ಸಾವಿರ ರೂ. ಹಣ ಲಂಚ ಪಡೆಯುವ ವೇಳೆ
ಲೋಕಾಯುಕ್ತ ಎಸ್ಪಿ ಕುಮಾರಚಂದ್ ನೇತೃತ್ವದಲ್ಲಿ, ಲೋಕಾಯುಕ್ತ ಡಿವೈಎಸ್ಪಿ, ಹಾಗೂ ಸಿಬ್ಬಂದಿ , ಹೆಡ್ ಕಾನ್ಸಸ್ಟೇಬಲ್ ಶಿವಕುಮಾರ್ ಸೇರಿ ದಾಳಿ ಮಾಡಿದರು.

ನಾಗರಿಕ ಪ್ರಶಾಂತ್ ನಾಯ್ಕ ಎಂಬುವವರಿಂದ ಶಿವಾನಂದ ತಾಮ್ರೆಣ್ಣನವರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿ, ಬಂಧಿಸಿದ್ದಾರೆ.
…

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button