KodaguFeatured Story

ಆಟೋದಲ್ಲಿ ಮಲಗಿರುವಾಗಲೇ ಪ್ರಾಣ ಬಿಟ್ಟ ಚಾಲಕ!

ಶನಿವಾರಸಂತೆಯ ಆಟೋ ಚಾಲಕ ಮಂಜುನಾಥ್ (50) ಅವರು ಮಲಗಿರುವಾಗಲೇ ಪ್ರಾಣ ಬಿಟ್ಟಿದ್ದಾರೆ.

ಸಿದ್ದಲಿಂಗಪುರ ನಿವಾಸಿ, ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ವಾಸವಿದ್ದ ಅವರು ಪ್ರತಿನಿತ್ಯ ಆಟೋದಲ್ಲೇ ಮಲಗಿ, ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದರು.

ನಿನ್ನೆಯೂ ಸಹ ಆಟೋದಲ್ಲೇ ಮಲಗಿದ್ದರು.ಬೆಳಗ್ಗೆ ಇತರೆ ಆಟೋದವರು ಬಂದು ನೋಡಿದಾಗ ಆಟೋದಲ್ಲೇ ಪ್ರಾಣ ಬಿಟ್ಟಿರುವ ವಿಷಯ ತಿಳಿದು ಬಂತು.

ಕಳೆದ 15 ವರ್ಷಕ್ಕೂ ಹೆಚ್ಚು ಕಾಲ ಇದೆ ವೃತ್ತಿಯಲ್ಲಿ ಇದ್ದರು.ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ವಿವಾಹವಾಗಿದ್ದು ಮನೆಯಲ್ಲಿ ಮನಸ್ತಾಪದಿಂದ
ಕುಟುಂಬದಿಂದ ದೂರ ಉಳಿದಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button