Raichur

ಕೋವಿಡ್-೧೯ ಸೋಂಕಿನಿAದ ಮೃತರ ಅವಲಂಭಿತರಿಗೆ ಸ್ವಯಂ ಉದ್ಯೋಗ, ಲಾಭದಾಯಕ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅರ್ಜಿ ಆಹ್ವಾನ

ರಾಯಚೂರು, ಜೂ.೨೪, (ಕ.ವಾ):- ರಾಷ್ಟಿçÃಯ ಪರಿಶಿಷ್ಟ ಜಾತಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಓSಈಆಅ) ದ ವತಿಯಿಂದ ಪರಿಶಿಷ್ಟ ಜಾತಿಗೆ ಸೇರಿದ ಕೋವಿಡ್-೧೯ ಸೋಂಕಿನಿAದ ಮೃತಪಟ್ಟವರ ಅವಲಂಭಿತರಿಗೆ ಸ್ವಯಂ ಉದ್ಯೋಗ ಹಾಗೂ ಲಾಭದಾಯಕ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆಯ ಘಟಕ ವೆಚ್ಚ ೫ ಲಕ್ಷ ರೂ. (ಅವಧಿ ಸಾಲ ೪ ಲಕ್ಷ ರೂ. ಮತ್ತು ಸಹಾಯಧನ ೧ ಲಕ್ಷ ರೂ.) ಗಳನ್ನು ನೀಡಲಾಗುತ್ತದೆ.s

ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬದ ಮುಖ್ಯಸ್ಥರು ಅಥವಾ ದುಡಿಯುವ ವ್ಯಕ್ತಿ ಕೋವಿಡ್-೧೯ ಸೋಂಕಿನಿAದ ಮೃತಪಟ್ಟವರ ಹಾಗೂ ಅವಲಂಭಿತರು ಅರ್ಜಿಯನ್ನು ಹಾಗೂ ಮೃತರ ಹೆಸರು ಮತ್ತು ವಿಳಾಸ, ಮೃತಪಟ್ಟವರ ವಯಸ್ಸಿನ ಅಥವಾ ಮರಣ ಸಮರ್ಥನೆ ಪ್ರಮಾಣ ಪತ್ರ, ಮೃತಪಟ್ಟವರ ಅವಲಂಭಿತರ ಹೆಸರು/ಕುಟುಂಬದ ವಂಶಾವಳಿ, ಮೃತಪಟ್ಟ ಅವಲಂಭಿತರ ದಾಖಲೆ, ಅವಲಂಭಿತರು ಮೃತರೊಂದಿಗೆ ಹೊಂದಿರುವ ಸಂಬAಧದ ದಾಖಲೆ, ಮೃತಪಟ್ಟವರ ಮತ್ತು ಅವಲಂಬಿತರ ಜಾತಿ/ಉಪಜಾತಿ, ಮೃತಪಟ್ಟವರ ಮತ್ತು ಅವಲಂಬಿತರ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಭಾವಚಿತ್ರ ಸೇರಿದಂತೆ ಇತರೆ ದಾಖಲೆಗಳೊಂದಿಗೆ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕರಿಗೆ ಸಲ್ಲಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಕಟಣೆ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button