bellary

ಬಾಲಕ ಕಾಣೆ ಬಳ್ಳಾರಿ

ಬಳ್ಳಾರಿ,ಜು.02 (ಕರ್ನಾಟಕ ವಾರ್ತೆ):ಬ್ರೂಸ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ವರ್ಷದ ಪ್ರಸಾದ್ ಎಂಬ ಬಾಲಕನು ಏ.15 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‍ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಬಾಲಕನ ಚಹರೆ ಗುರುತು: 5.3 ಅಡಿ ಎತ್ತರ, ಗೋಧಿ ಮೈಬಣ್ಣ, ದಪ್ಪವಾದ ಮೈಕಟ್ಟು, ದುಂಡು ಮುಖ, ಎರಡು ಕೈಗಳಿಗೆ ಅಮ್ಮ ಅಂತ ಅಚ್ಚೆ ಇರುತ್ತದೆ, ಕನ್ನಡ ಮತ್ತು ತೆಲುಗು ಮಾತಾಡುತ್ತಾನೆ, ಅಂಗಿ ಮತ್ತು ನಿಕ್ಕರ್ ಧರಿಸಿರುತ್ತಾ ನೆ.
ಈ ಚಹರೆಯುಳ್ಳ ಬಾಲಕನ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button