ಎಸ್ಸೆಸ್ಸೆಲ್ಸಿ ಹೊಸ ಮಾದರಿ ಪರೀಕ್ಷೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೆರವಾಗಲು ಇಲ್ಲಿಯ ಶಾಹೀನ್ ಪ್ರೌಢಶಾಲೆಯು ಉಚಿತ ಆನ್ಲೈನ್ ಮಾದರಿ ಪರೀಕ್ಷಾ ಸರಣಿಗಳನ್ನು ರೂಪಿಸಿದೆ.
ಕನ್ನಡ, ಉರ್ದು ಹಾಗೂ ಆಂಗ್ಲ ಮಾಧ್ಯಮದಲ್ಲಿ ಈಗಾಗಲೇ ಮಾದರಿ ಪರೀಕ್ಷಾ ಸರಣಿಗಳು ಆರಂಭಗೊಂಡಿವೆ.
ಜುಲೈ 19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ತಲಾ 40 ಅಂಕಗಳ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಗಳನ್ನು ಒಎಂಆರ್ ಹಾಳೆ ಬಳಸಿ ನಡೆಸಲಾಗುತ್ತಿದೆ. ಹೀಗಾಗಿ ಹೊಸ ಪರೀಕ್ಷೆ ಮಾದರಿಗೆ ಅನುಗುಣವಾಗಿ ಉಚಿತ ಆನ್ಲೈನ್ ಮಾದರಿ ಪರೀಕ್ಷಾ ಸರಣಿಗಳನ್ನು ನಡೆಸಲಾಗುತ್ತಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆಗಳನ್ನು ನುರಿತ ತಜ್ಞರಿಂದ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು shaheendlp.com/sslc
ವೆಬ್ಸೈಟ್ ಮೂಲಕ ಮಾದರಿ ಪರೀಕ್ಷಾ ಸರಣಿಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ಸಂಖ್ಯೆ 18001216235 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.