
Dakshina KannadaFeatured Story
ಧರ್ಮಸ್ಥಳ: 11ನೇ ಗುರುತಿನಲ್ಲಿ ಮೂಳೆ ಪತ್ತೆ?
ಧರ್ಮಸ್ಥಳ: ಕಳೆದ 11 ದಿನಗಳಿಂದ ಧರ್ಮಸ್ಥಳ ಪರಿಸರದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಇಂದು ದೂರುದಾರ ಗುರುತಿಸಿದ 11ನೇ ಸ್ಥಳದಲ್ಲಿ ಮಾನವ ಮೂಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇಂದು ದೂರುದಾರನು 11ನೇ ಗುರುತಿನಿಂದ ಸ್ವಲ್ಪ ದೂರದಲ್ಲಿ ಶೋಧ ನಡೆಸಿದ್ದು, ಮಾನವ ಅವಶೇಷದ ಹಲವು ಭಾಗಗಳು ಪತ್ತೆಯಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ಊಟವನ್ನು ಮಾಡದೇ ಕಾರ್ಯಾಚರಣೆ ಮುಂದುವರಿಸಿದೆ ಎಂದು ಹೇಳಲಾಗುತ್ತದೆ.




