
ಉಡುಪಿ | ಮಲ್ಪೆ : ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
ಕೊಡವೂರು ಗ್ರಾಮದ ಮೇಘಾ 17 ವರ್ಷ 8 ತಿಂಗಳು ಇವರು ಕಿದಿಯೂರು ಶ್ಯಾಮಿಲಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಕಳೆದ ಒಂದು ವರ್ಷದಿಂದ ಪೀಡ್ಸ್ ಖಾಯಿಲೆಯಿದ್ದು, ಈ ಬಗ್ಗೆ ಉಡುಪಿ ಮಿತ್ರಾ ಆಸ್ಪತ್ರೆ ಮತ್ತು ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ದಿನಾಂಕ 06/08/2025 ರಂದು ಸಂಜೆ 5:10 ಗಂಟೆಯಿಂದ 5:30 ಗಂಟೆ ನಡುವಿನ ಸಮಯದಲ್ಲಿ ಮನೆಯ ಎದುರು ಇರುವ ಸ್ನಾನಗೃಹದ ತಗಡು ಶೀಟಿನ ಮಾಡಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಚೂಡಿದಾರ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 48/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಸೂಚನೆ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ, ಸಮಸ್ಯೆಯನ್ನು ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ತೀರಾ ಅಗತ್ಯದ ಸಂದರ್ಭದಲ್ಲಿ ಸಮಾಲೋಚಕರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ




