Bidar

ಖೈದಿಗಳಿಗೆ, ಕ್ಷಯರೋಗ, ಹೆಚ್‌ಐವಿ ಅರಿವು, ತಪಾಸಣೆ

ಬೀದರ ಜುಲೈ 29 (ಕರ್ನಾಟಕ ವಾರ್ತೆ):-ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದ ಯುಥ್ ಮುಮೇಂಟ್ ಸಂಸ್ಥೆ ಇವರ ಸಂಯುಕ್ತಾಶಯದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಕ್ಷಯರೋಗ ಮತ್ತು ಹೆಚ್.ಐ.ವಿ. ಕುರಿತು ಅರಿವು ಮತ್ತು ತಪಾಸಣೆ ಕಾರ್ಯಕ್ರಮವು ಜುಲೈ 29ರಂದು ನಡೆಯಿತು.
ರಾಷ್ಟç ಮತ್ತು ರಾಜ್ಯವು 2025ರೊಳಗೆ ಕ್ಷಯರೋಗವನ್ನು ಅಂತ್ಯಗೊಳಿಸಲು ಸಜ್ಜಾಗಿದ್ದು, ಕ್ಷಯರೋಗವನ್ನು ಅಂತ್ಯಗೊಳಿಸಲು ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಬೀದರ ಜಿಲ್ಲೆಯ ಜಿಲ್ಲಾ ಕಾರಗೃಹದ ಕೈದಿಗಳಿಗೆ ನಡೆದ ಕ್ಷಯರೋಗ ಮತ್ತು ಹೆಚ್.ಐ.ವಿ. ಕುರಿತು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಟಿ.ಪಿ.ಸಿದ್ರಾಮ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಇದೆ ವೇಳೆ ಕ್ಷಯರೋಗ ಮತ್ತು ಹೆಚ್.ಐ.ವಿ. ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಯಿತು.
ಜಿಲ್ಲಾ ಕಾರಾಗೃಹದ ವೈದ್ಯರಾದ ವೈಜಿನಾಥ ತುಂಗಾAವ್ ಅವರು ಮಾತನಾಡಿ, ಪ್ರಾರಂಭಿಕ ಹಂತದಲ್ಲೆ ಕ್ಷಯರೋಗ ಪತ್ತೆ ಹಚ್ಚಿದಲ್ಲಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಸತತವಾಗಿ 2 ವಾರಗಳ ಕೆಮ್ಮು, ಸಂಜೆ ವೇಳೆ ಜ್ವರ, ಕಫದಲ್ಲಿ ರಕ್ತ ಬಿಳುವುದು, ರಾತ್ರಿ ಬೆವರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದೆ ಇರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಕ್ಷಯರೋಗ ಕಂಡುಬAದಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಎಸ್.ಟಿ.ಎಸ್. ಸಂಜುಕುಮಾರ ಅವರು ಮಾತನಾಡಿ, ಪ್ರತಿ ಕ್ಷಯರೋಗಿಗಳಿಗೆ ಚಿಕಿತ್ಸಾ ಅವಧಿಯವರೆಗೆ ಮಾಸಿಕ 500 ರೂ.ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತದೆ ಹಾಗೂ ಖಾಸಗಿ ವೈದ್ಯರಿಗೆ ಕ್ಷಯರೋಗದ ಮಾಹಿತಿ ಮತ್ತು ಚಿಕಿತ್ಸೆ ನೀಡಿದಲ್ಲಿ 1000 ರೂ.ನೀಡಲಾಗುತ್ತದೆ. ಎಂದು ತಿಳಿಸಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶರಣಬಸಪ್ಪಾ ಅವರು ಅಧ್ಯಕ್ಷತೆ ವಹಿಸಿದ್ದರು. ಪಿ.ಪಿ.ಎಂ. ಸಂಯೋಜಕರಾದ ಗೌತಮ ಜ್ಯೊತಿ, ಸಂಜುಕುಮಾರ ಎಸ್.ಟಿ.ಎಸ್ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button