Udupi

ಮಲ್ಪೆ ಬೀಚ್ ನಲ್ಲಿ ನಾಪತ್ತೆಯಾಗಿದ್ದ ಕೊಡಗು ಮೂಲದ ಯುವತಿಯ ಮೃತದೇಹ ಪತ್ತೆ!

ಮಲ್ಪೆ: ಬೀಚ್ ನಲ್ಲಿ ಈಜಾಡುವ ಸಂದರ್ಭದಲ್ಲಿ ನೀರುಪಾಲಗಿದ್ದ ಯುವತಿಯ ಮೃತದೇಹ ಪತ್ತೆಯಾಗಿದೆ.

ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ರವಿವಾರ ನಾಪತ್ತೆಯಾಗಿದ್ದರು. ಈಕೆಯ ಜೊತೆ ಇದ್ದ ಸ್ನೆಹಿತರಾದ ಮೈಸೂರು ವಿಜಯಪುರದ ಎಂ.ಯು.ಶೈನಿ(20), ನವ್ಯ ಮಂದಣ್ಣ (20), ನಿಖಿಲ್ ಗೌಡ (20) ಎಂಬವರನ್ನು ಸ್ಥಳೀಯರು ರಕ್ಷಿಸಿದ್ದರು.

ಮಲ್ಪೆಗೆ ಪ್ರವಾಸಕ್ಕೆಂದು ಬಂದಿದ್ದ ಇವರು ಈಜಲು ಹೋಗಿ ಪ್ರಾಣಕ್ಕೆ ಅಪಾಯ ತಂದೊಡ್ಡಿದ್ದರು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button