
Uttara Kannada
ಮಹಿಳೆ ನಾಪತ್ತೆ
ಕಾರವಾರ : ದಿವಗಿ ಗ್ರಾಮದಿಂದ
ಅಕ್ಷತಾ ಮೋಹನ ಅಂಬಿಗ (30 ವರ್ಷ) ಎಂಬ ಮಹಿಳೆ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಮಟಾ ತಾಲೂಕಿನ ದಿವಗಿ ಗ್ರಾಮದ ನಿವಾಸಿ ಅಕ್ಷತಾ ದಿನಾಂಕ 17-09-2025 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಕುಮಟಾ ಮಾರ್ಕೆಟಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಕುಟುಂಬದವರು ದೂರು ನೀಡಿದ್ದಾರೆ.
ಕಾಣೆಯಾದ ಮಹಿಳೆ ಚಹರೆ : ಬಿಳಿ ಮೈಬಣ್ಣ, ಉದ್ದನೆಯ ಮುಖ, ಸಾಧಾರಣಾ ಮೈಕಟ್ಟು, 5 ಅಡಿ ಎತ್ತರ, ಕನ್ನಡ, ಹಿಂದಿ, ಇಂಗ್ಲಿಷ್, ಕೊಂಕಣಿ ಭಾಷೆ ಮಾತನಾಡುತ್ತಾಳೆ. ಹಸಿರು ಬಣ್ಣದ ಹೂವಿನ ಚಿತ್ರವಿರುವ ಚೂಡಿದಾರ ಧರಿಸಿರುತ್ತಾಳೆ. ಸಾರ್ವಜನಿಕರಲ್ಲಿ ಕಂಡುಬ ದಲ್ಲಿ ಕುಮಟಾ ಪೊಲೀಸ್ ಠಾಣೆ ಪೊಲೀಸ್ ದೂರವಾಣಿ ಸಂಖ್ಯೆ:08386-222333, 9480805272, 9480805234 ಅಥವಾ ಇ-ಮೇಲ್ [email protected] ನ್ನು ಸಂಪರ್ಕಿಸುವAತೆ ಕುಮಟಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




