Featured Story

2023 ರ ಡಿಸೆಂಬರ್’ನಲ್ಲಿ ಅಯೋಧ್ಯೆಯ ರಾಮ ಮಂದಿರ ಭಕ್ತರ ದರ್ಶನಕ್ಕೆ ಸಿದ್ಧ!

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುನಿರೀಕ್ಷಿತ ರಾಮ ಮಂದಿರ 2023 ರ ಡಿಸೆಂಬರ್ ನಲ್ಲಿ ಉದ್ಘಾಟನೆಗೊಂಡು ಭಕ್ತರ ದರ್ಶನಕ್ಕೆ ಸಿದ್ಧವಾಗಲಿದೆ.

ಎನ್.ಐ.ಐ ವರದಿಯ ಪ್ರಕಾರ, ಗರ್ಭಗುಡಿ, ಐದು ಮಂಟಪ ಮತ್ತು ಮೊದಲನೆ ಮಹಡಿ ಡಿಸೆಂಬರ್, 2023 ರ ಕ್ಕೆ ಸಿದ್ಧಗೊಳ್ಳಲಿದೆಯೆಂದು ತಿಳಿದು ಬಂದಿದೆ. ರಾಮ ಮಂದಿರ ಕಾಮಗಾರಿಗೆ 1000 ಕೋಟಿ ವೆಚ್ಚವಾಗುತ್ತಿದ್ದು ಈಗಾಗಲೇ 3000 ಕೋಟಿ ರೂಪಾಯಿಗಳು ಸಂಗ್ರಹವಾಗಿವೆ.

ಈ ಪ್ರದೇಶದಲ್ಲಿ ಮ್ಯೂಸಿಯಮ್, ಡಿಜಿಟಲ್ ಆರ್ಕೈವ್ ಮತ್ತು ಸಂಶೋಧನಾ ಕೇಂದ್ರಗಳನ್ನೂ ಸ್ಥಾಪಿಸಲಾಗುತ್ತಿದೆ. ರಾಮ ಮಂದಿರದ ಸಂಪೂರ್ಣ ಸಂಕಿರ್ಣ ಸುಮಾರು ನೂರು ಎಕರೆ ಭೂಮಿಯಲ್ಲಿ ಹರಡಿಕೊಂಡಿರಲಿದೆ.

ರಾಮ ಮಂದಿರ ನಿರ್ಮಾಣಕ್ಕೆ ಮುಖ್ಯವಾಗಿ ರಾಜಸ್ಥಾನ ಮತ್ತು ಬನ್ಸಿ ಪಹಾರ್ ಭರತ್ ಪುರದಿಂದ ಕಲ್ಲುಗಳನ್ನು ತರಲಾಗುತ್ತಿದೆ ಎಂದು ತಿಳಿದು ಬಂದಿದೆ. ಐದು ಲಕ್ಷ ಮಂದಿ ಭಕ್ತರಿಗೆ ಏಕ ಕಾಲದಲ್ಲಿ ಸೇರಲು ವ್ಯವಸ್ಥೆ ಈ ಪ್ರದೇಶದಲ್ಲಿ ಮಾಡಲಾಗುವುದೆಂಬ ಮಾಹಿತಿ ಲಭ್ಯವಾಗಿದೆ.

ಈ ಮಂದಿರದ ಸುರಕ್ಷತೆಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರ ಸುರಕ್ಷಾ ದಳ ನಿರ್ಮಿಸಲಿದೆ. ರಾಮ ಮಂದಿರದ ಒಳಗೆ ಸ್ವತಃ ಟ್ರಸ್ಟ್ ಭದ್ರತೆ ಕಾಯ್ದುಕೊಳ್ಳಲಿದೆಯೆಂದು ವರದಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button