Udupi

ಸಮವಸ್ತ್ರದ ಪಥಸಂಚಲನದಿಂದ ಸಮಾನತೆ ಅಸಾಧ್ಯ:ಜಯನ್ ಮಲ್ಪೆ

ಮಲ್ಪೆ: ಮನಸ್ಸೆಲ್ಲ ವಿಕಾರ,ದೇಹದಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಮವಸ್ತç ಧರಿಸಿ ಬೀದಿಬೀದಿಗಳಲ್ಲಿ ಪಥ ಸಂಚಲನ ನಡೆಸಿದರೆ ದೇಶದಲ್ಲಿ ಸಮಾನತೆ ಮೂಡಿಸಲು ಅಸಾಧ್ಯವೆಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಶನಿವಾರ ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಅಂಬೇಡ್ಕರ್ ಪರಿಬ್ಬಾಣದ ಪ್ರಯುಕ್ತ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಎಂಬ ಕ್ಯಾಂಡಲ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡುತ್ತಾ,

ಈ ದೇಶದಲ್ಲಿ ಸಮಾನತೆಯನ್ನು ಒಪ್ಪದ ಮಾನಸಿಕ ವಿಕಾರಿಗಳಾದ ಆರ್‌ಎಸ್‌ಎಸ್ ಶಿಸ್ತಿನ ಹೆಸರಿನಲ್ಲಿ ಜೀವ ವಿರೋಧಿ ಕೆಲಸಮಾಡುತ್ತಾ ದಲಿತರನ್ನು ಮತ್ತು ಹಿಂದುಳಿದವರನ್ನು ಬ್ರೆöÊನ್ ವಾಸ್ ಮಾಡಲು ಬೈಠಕ್‌ಗಳನ್ನು ನಡೆಸುತ್ತದೆ.ಶಿಸ್ತಿನ ಹೆಸರಿನಲ್ಲಿ ಯಾರೋ ಹಾಕಿದ ಗೆರೆಯನ್ನು ದಾಟದೆ ಹೋಗುವ ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಜೈಲಿಗೆ ತಳುತ್ತಿದ್ದಾರೆ ಎಂದರು.

ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ ಜಾಗತೀಕರಣ,ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು,ಶಿಕಣವನ್ನು ಇಂದು ವ್ಯಾಪಾರಿಕಾರೀಕರಣ ಮಾಡಲಾಗುತ್ತಿದೆ. ಜೊತೆಗೆ ಶಿಕಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ,ಅAಬೇಡ್ಕರ್‌ರವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು,ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯಮಾಡುತ್ತಿದೆ.ದಲಿತ ಚಳುವಳಿ ಖಾಸಾಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟನಡೆಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ,ರಮೇಶ್ ಕಾಂಚನ್,ಮಹಾಬಲ ಕುಂದರ್,ಸತೀಶ್ ನಾಯ್ಕ,ರಮೇಶ್ ತಿಂಗಳಾಯ,ವೆAಕಟೇಶ್ ಕುಲಾಲ್,ಮಂಜುನಾಥ,ಶರತ್ ಶೆಟ್ಟಿ,ಮೀನಾಕ್ಷಿ ಮಾಧವ,ಉಷಾ,ಸತೀಶ್ ಮಂಚಿ,ಮಾಧವ ಬನ್ನಂಜೆ ,ಸತೀಶ್ ಕೊಡವೂರು, ಸುಧಾರ್ಶನ್ ಪಡುಕರೆ,ಯಾದವ ಅಮೀನ್ ಕೊಳ,ಹರೀಶ್ ಸಲ್ಯಾನ್, ಸಂತೋಷ್ ಕಪ್ಪೆಟ್ಟು,ರವಿರಾಜ್ ಲಕ್ಮೀನಗರ,ದಯಾಕರ ಮಲ್ಪೆ,ಸಾಧು ಚಿಟ್ಪಾಡಿ,ಕೃಷ್ಣಶ್ರೀಯಾನ್,ಸುಮಿತ್ ನೆರ್ಗಿ,ಗುಣವಂತ ತೋಟ್ಟಂ,ಭಗವಾನ್, ವಿನಯ ಬಲರಾಮನಗರ,ಸತೀಸ್ ಕಪ್ಪೆಟ್ಟು,ದೀಪಕ್,ಸಂದ್ಯಾಕೃಷ್ಣ,ಪೂರ್ಣಿಮ ಸಂದ್ಯಾತಿಲಕ್,ಪ್ರಮೀಳ,ಶಶಿಕಲಾ ತೊಟ್ಟಂ,ವಿನಯ ಕೊಡಂಕೂರು,ವಿನೋದ ಮುಂತಾದವರು ಭಾಗವಹಿಸಿದ್ದರು.

Back to top button