Mumbai

ನಾಲ್ವರು ವಿಮಾನ ಕಾರ್ಯಾಚರಣೆ ಇನ್‌ಸ್ಪೆಕ್ಟರ್‌ಗಳ ಅಮಾನತು

ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು (ಎಫ್‌ಒಐ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅಮಾನತುಗೊಳಿಸಿದೆ

ಮುಂಬೈ: ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು (ಎಫ್‌ಒಐ) ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅಮಾನತುಗೊಳಿಸಿದೆ.

ನೂರಾರು ಇಂಡಿಗೊ ವಿಮಾನ ರದ್ದಿನಿಂದ ಲಕ್ಷಾಂತರ ಮಂದಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.

ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಿಂದ 50 ವಿಮಾನಗಳ ಕಾರ್ಯಾಚರಣೆಗಳು ರದ್ದುಗೊಂಡಿವೆ.

ಎಫ್‌ಒಐಗಳು ನಾಗರಿಕ ವಿಮಾನಯಾನ ನಿರ್ದೇಶನಾಲಯಲ್ಲಿ ಕೆಲಸ ಮಾಡುವ ಹಿರಿಯ ಅಧಿಕಾರಿಗಳಾಗಿದ್ದು, ಅದರ ನಿಯಂತ್ರಕ ಮತ್ತು ಸುರಕ್ಷತಾ ಮೇಲ್ವಿಚಾರಣಾ ಕಾರ್ಯಗಳ ಭಾಗವಾಗಿ ಕೆಲಸ ಮಾಡುತ್ತಾರೆ. ಆಗಾಗ್ಗೆ ವಿಮಾನಯಾನ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗುತ್ತದೆ.

Back to top button