
ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲಿದ್ದಾರೆ ಕೇಂದ್ರ ಗೃಹ ಇಲಾಖೆಯಿಂದ ಅಕಾಲಿಕ ನಿವೃತ್ತಿಗೊಳಗಾದ ಮಾಜಿ ಐಪಿಎಸ್ ಅಮಿತಾಬ್ ಠಾಕೂರ್!
ಲಕ್ನೊ: ಅಕಾಲಿಕ ನಿವೃತ್ತಿಕ್ಕೊಳಗಾಗಿದ್ದ ಉತ್ತರ ಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರು ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಅವರ ಕುಟುಂಬ ಘೋಷಿಸಿದೆ.
ಅಮಿತಾಬ್ ಠಾಕೂರ್ ಅವರ ಪತ್ನಿ ಮಾತನಾಡಿ, ನೂತನ್ ಅವರಿಗೆ ಇದು ತತ್ವಗಳ ಹೋರಾಟ ಎಂದು ಹೇಳಿದ್ದಾರೆ.
ಶ್ರೀ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ, ಅನುಚಿತ, ದಮನಕಾರಿ, ಕಿರುಕುಳ ಸಹಿತ ಮತ್ತು ತಾರತಮ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ. ಆದ್ದರಿಂದ ಯೋಗಿ ಆದಿತ್ಯನಾಥ್ ಸ್ಪರ್ಧಿಸುವ ಯಾವುದೇ ಕ್ಷೇತ್ರದಲ್ಲಿ ಅವರ ವಿರುಧ್ಧ ತನ್ನ ಪತಿ ಸ್ಪರ್ಧಿಸುತ್ತಾರೆ.ಇದು ಅವರಿಗೆ ತತ್ವಗಳ ಹೋರಾಟವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವಾಲಯವು 2028 ರಲ್ಲಿ ನಿವೃತ್ತಿಯಾಗಬೇಕಾದ ಅಮಿತಾಬ್ ಠಾಕೂರ್ ಅವರನ್ನು ಬಲವಂತವಾಗಿ ನಿವೃತ್ತಗೊಳಿಸಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಎಂದು ಕಾರಣ ನೀಡಿತ್ತು.
2015 ರ ಜುಲೈನಲ್ಲಿ ಮುಲಾಯಮ್ ಸಿಂಗ್ ಯಾದವ್ ಬೆದರಿಕೆವೊಡ್ಡಿದ್ದಾರೆ ಎಂಬ ಆರೋಪದ ನಂತರ ಅಮಾನಿತಿಗೂ ಒಳಗಾಗಿದ್ದರು. ನಂತರ ಲಕ್ನೊ ನ್ಯಾಯಾಲಯದ ಕೇಂದ್ರ ಆಡಳಿತಾತ್ಮಕ ಪೀಠವು ಅಮಾನತನ್ನು ರದ್ದು ಮಾಡಿತ್ತು.




