Udupi

ಮಲ್ಪೆ: `ಕೊಳೆತ ಸ್ಥಿತಿಯಲ್ಲಿ ಶವ‌‌ ಪತ್ತೆ.`

‌‌
ಮಲ್ಪೆ,ಜ.15: ಮಲ್ಪೆ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುವ ಪಡು ತೋನ್ಸೆ ಬೆಂಗ್ರೆ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿರುವ‌ ಘಟನೆ ನಡೆದಿದೆ. ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ.

ಮನೆಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು ಮಲ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮೃತರು ಶಶಿಕಾಂತ್ ಸುವರ್ಣ (70 ವ) ಮನೆಯಲ್ಲಿ ಕೆಲವು ಸಮಯದಿಂದ ಒಬ್ಬರೆ ವಾಸವಾಗಿದ್ದರೆಂದು ತಿಳಿದುಬಂದಿದೆ.‌ ವೃದ್ಧರು ಮೃತಪಟ್ಟು ಮೂರು ದಿವಸ ಕಳೇದಿರಬಹುದೆಂದು ಶಂಕಿಸಲಾಗಿದೆ.

ಕಳೇಬರವನ್ನು ತೆಗೆದು, ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ಸತೀಶ್ ಕುಮಾರ್, ಹಾಗೂ ಮಧುಸೂದನ್ ಎನ್ನುವರು ಪೊಲೀಸ್ ಇಲಾಖೆಗೆ ನೆರವಾದರು. ಮುಖ್ಯ ಆರಕ್ಷಕರಾದ ದಿನೇಶ್, ನಾಗರಾಜ್ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು.

Back to top button