Featured StoryState News

ನೆಹರು ಕುರಿತು ಸಿ.ಟಿ ರವಿಗೇನು ಗೊತ್ತು, ಅವರು ದೇಶದ ಅಸ್ಮಿತೆ – ಬಿಜೆಪಿ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್

ಮೈಸೂರು: ನೆಹರುರವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿತ್ತು. ಸಿ.ಟಿ.ರವಿ ಟೀಕೆ ಯಾರು ಮೆಚ್ಚುವಂತಹದ್ದಲ್ಲ ಎಂದು ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೀಡಿರುವ ಹೇಳಿಕೆ ಬಿಜೆಪಿಗೆ ಶೋಭೆ ತರಲ್ಲ. ಸಿ.ಟಿ.ರವಿ ಮೇಲ್ಮನೆ, ಕೆಳಮನೆ ನಿಯಮಾವಳಿಗಳನ್ನ ಓದಬೇಕು. ನೆಹರು ಅಸ್ತಂಗತವಾದ ವೇಳೆ ವಾಜಪೇಯಿ ಮಾಡಿದ ಭಾಷಣವನ್ನು ಸಿ.ಟಿ.ರವಿ ಓದಬೇಕು. ಬಲಿಷ್ಠ ಭಾರತ ಕಟ್ಟಿದ ನೆಹರು ಬಗ್ಗೆ ಹುಕ್ಕಾಬಾರ್ ಆರೋಪ ಸಲ್ಲದು. ನೆಹರು ಬಗ್ಗೆ ನಿಮಗೇನು ಗೊತ್ತು ರವಿ. ನೆಹರು ಭಾರತದ ಗರ್ವ, ಅಸ್ಮಿತೆ. ಅಂತಹ ಜನನಾಯಕನ ಬಗ್ಗೆ ಲಘುವಾದ ಹೇಳಿಕೆಯನ್ನ ವಾಪಾಸ್ ಪಡೆಯಬೇಕು. ಯಾರನ್ನೋ ಮೆಚ್ಚಿಸಲಿಕ್ಕೆ ಇಂತಹ ಹೇಳಿಕೆಗನ್ನ‌ ಕೊಡಬೇಡಿ ಎಂದು ಹೇಳಿದರು.

ವೈಯುಕ್ತಿಕ ಜೀವನದ ಬಗ್ಗೆ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ. ಐವರು ಮಾಜಿ ಮುಖ್ಯಮಂತ್ರಿಗಳು ಯಾಕೆ ಮೌನ ವಹಿಸಿದ್ದೀರಿ. ಯಾಕೆ‌ ನಿಮ್ಮ ಶಾಸಕರಿಗೆ ಶಟಪ್ ಅಂತ ಹೇಳುವ ನೈತಿಕತೆ ಕಳೆದುಕೊಂಡಿದ್ದೀರ ಎಂದು ವಿಶ್ವನಾಥ್ ಕಿಡಿಕಾರಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button