
Featured Story
ಅಮೇರಿಕಾ ಸೈನಿಕರ ನಿಯಂತ್ರಣದಲ್ಲಿರುವ ಕಾಬೂಲ್ ಏರ್ಪೋರ್ಟ್ ನಲ್ಲಿ ಐದು ಮಂದಿ ಹತ್ಯೆ!
ಕಾಬೂಲ್; ದೇಶ ತೊರೆಯಲು ನಾಗರಿಕರು ಏರ್ಪೋರ್ಟ್ ನಲ್ಲಿ ಮುಗಿಬಿದ್ದಿದ್ದು ಇದೀಗ ಬಂದ ಮಾಹಿತಿಯ ಪ್ರಕಾರ ಐದು ನಾಗರಿಕರ ಹತ್ಯೆಯಾಗಿದೆ.
ಜನರ ನಿಯಂತ್ರಣಕ್ಕಾಗಿ ಅಮೇರಿಕ ಸೈನಿಕರು ಗುಂಡು ಹಾರಿಸಿದ ಪರಿಣಾಮ ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ವರದಿಯಾಗಿದೆ. ಆದರೆ ಕಾಲ್ತುಳಿತದಿಂದಲೂ ಸತ್ತಿರುವ ಸಾಧ್ಯತೆಯ ಬಗ್ಗೆ ಹೇಳಲಾಗುತ್ತಿದೆ.
ಪ್ರಸ್ತುತ ಕಾಬೂಲ್ ಏರ್ಪೋರ್ಟ್ ಅಮೇರಿಕಾ ಸೈನ್ಯದ ವಶದಲ್ಲಿದ್ದು ಅಮೇರಿಕದ ನಾಗರಿಕರನ್ನು ಅಫಘಾನಿಸ್ತಾನದಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.




