Featured Story

ಕಾಬೂಲ್ ಅಶ್ರಫ್ ಘನಿ ಆಡಳಿತಕ್ಕಿಂತ ತಾಲಿಬಾನ್ ಆಡಳಿತದಲ್ಲಿ ಸುರಕ್ಷಿತ ಎಂದ ರಷ್ಯಾ!

ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಪ್ರಾಬಲ್ಯ ಸಾಧಿಸಿದೆ. ಇಡೀ ವಿಶ್ವದ ಗಮನ ಅಫಘಾನ್ ಬಿಕ್ಕಟ್ಟಿನಲ್ಲಿದೆ ಈತನ್ಮಧ್ಯೆ ಕೆಲವೊಂದು ದೇಶಗಳು ತಾಲಿಬಾನಿಗರ ಬೆಂಬಲಕ್ಕೆ ನಿಂತಿದೆ. ಈ ಮುಂಚೆ ಚೀನಾ ಮತ್ತು ಪಾಕಿಸ್ತಾನ ತಾಲಿಬಾನರು ಅಫಘಾನಿಸ್ತಾನವನ್ನು ವಶಪಡಿಸಿಕೊಂಡದ್ದನ್ನು ವಿವಿಧ ಹೇಳಿಕೆಯ ಮುಖಾಂತರ ಪ್ರಶಂಸಿತ್ತು.

ಇದೀಗ ರಷ್ಯಾದ ರಾಯಭಾರಿ ಡಿಮಿಟ್ರಿ ಝಿರ್ನಾವ್ ಹೇಳಿಕೆ ನೀಡಿ ಕಾಬೂಲ್ ಅಶ್ರಫ್ ಘನಿ ಆಡಳಿತಕ್ಕಿಂತ ತಾಲಿಬಾನ್ ಆಡಳಿತದಲ್ಲಿ ಸುರಕ್ಷಿತ ಎಂಬ ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ತಾಲಿಬಾನಿಗರು ಅಫ್ವಾನಿಸ್ತಾನವನ್ನು ವಶಪಡಿಸಿಕೊಂಡ ವೇಗವನ್ನು ನೋಡಿ ದಂಗಾಗಿರುವ ಕುರಿತು ಹೇಳಿದ್ದು ಅಮೇರಿಕಾವು ತನ್ನ ನಾಗರಿಕರನ್ನು ತೆರವುಗೊಳಿಸುವಲ್ಲಿ ನಿರತವಾಗಿದೆ. ಆದರೆ ತಾಲಿಬಾನಿಗರು ಇದೀಗ ತೋರುತ್ತಿರುವ ಧನಾತ್ಮಕ ಸ್ಪಂದನೆ ನಿಜವಾಗಿಯೂ ವ್ಯವಹಾರಿಕವಾಗಿ ಉತ್ತಮವಾಗಿದೆಯೆಂದು ಹೇಳಿಕೊಂಡಿದೆ.

ಈಗ ಕಾಬೂಲಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಎಲ್ಲವೂ ಶಾಂತಿಯುತವಾಗಿದೆ. ಕಾಬೂಲ್ ಈಗ ಅಶ್ರಫ್ ಘನಿ ಹಿಡಿತಕ್ಕಿಂತ ತಾಲಿಬಾನ್ ಆಡಳಿತದಲ್ಲಿ ಸುರಕ್ಷಿತವಾಗಿದೆಯೆಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದೆ. ರಷ್ಯಾದ ರಾಯಭಾರಿ ಕಚೇರಿಯ ನೂರು ಮಂದಿ ಅಲ್ಲಿದ್ದಾರೆ. ಅವರ ಭದ್ರತೆಯನ್ನು ತಾಲಿಬಾನ್ ನೋಡಿಕೊಳ್ಳುತ್ತಿದೆ.‌ಶಾಲೆಗಳು ಆರಂಭಗೊಂಡಿದೆ. ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಂದು ರಷ್ಯಾ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button