Featured StoryUdupi

ಕಾಪು | ರಂಝಾನ್ ಸ್ವಾಗತ ಕಾರ್ಯಕ್ರಮ

ಕಾಪು : ಪುಣ್ಯಗಳ ಪರ್ವತವನ್ನೇ ಹೊತ್ತು ಕೊಂಡು, ಅದನ್ನು ಬಯಸುವ ದಾಸರಿಗೆ ನೀಡಲು ಸಿದ್ದವಾಗಿರುವ ಪವಿತ್ರ ಪುಣ್ಯ ರಮ ಝಾನ್ ಮಾಸ ನಮ್ಮ ಮನೆಬಾಗಿಲಿನ ಬಳಿ ಬರುತಿದ್ದು, ಅದನ್ನು ಅಷ್ಟೇ ಸಂಭ್ರಮದಿಂದ ಸ್ವಾಗತಿಸಲು ನಾವು ಸಿದ್ಧರಿರಬೇಕು ಎಂದು ತೋನ್ಸೆಯ ಅಬುಲೈಸ್ ಮಸ್ಜಿದ್ ನ ಖತೀಬ್ ವ ಇಮಾಮ್ ಆಗಿರುವ ಮೌಲಾನ ಅಬ್ದುಲ್ ಘನಿ ಜಾಮಾಯಿ ಯವರು ಹೇಳಿದರು.

IMG 20260209 WA0003 Featured Story, Udupi

ಅವರು ಕಾಪು ಜಾಮಿಯಾ ಮಸ್ಜಿದ್ ಜದೀದ್ ಕಲಾನ್ ಕೊಂಬಗುಡ್ಡೆ ಯಲ್ಲಿ ಕಾಪು ಜಮಾ ಅತೆ ಇಸ್ಲಾಮೀ ಹಿಂದ್ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಒರ್ಗನೈಜೆಷನ್ ( ಎಸ್. ಐ. ಓ ) ಹಮ್ಮಿ ಕೊಂಡ್ಡಿದ್ದ ರಮ ಝಾನ್ ಸ್ವಾಗತ ಕಾರ್ಯಕ್ರಮದಲ್ಲಿ ಮಾತಾಡುತ್ತಾ ಹೇಳಿದರು.
ಮಾತನ್ನು ಮುಂದುವರಿಸುತ್ತಾ ಅವರು, ನಮ್ಮ ಎಲ್ಲಾ ಆರಾಧನೆಗಳು ಅಲ್ಲಾಹನಿಗಾಗಿಯೇ ಇರಬೇಕು. ಸದಾ ನಮ್ಮ ಹೃದಯವನ್ನು ಸ್ವಚ್ಚವಾಗಿರಿಸಬೇಕು , ಸಂಬಂಧಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು. ನಮ್ಮಿಂದ ಆಗಿರುವ ತಪ್ಪನ್ನು ಅವಲೋಕನ ಮಾಡಿ, ಅಲ್ಲಾಹನ ಮುಂದೆ ಮನಸ್ಸಿನಾಳದಿಂದ ಕ್ಷಮೆ ಯಾಚಿಸಬೇಕು. ನಮ್ಮ ಗರಿಷ್ಠ ಸಮಯ ಕುರ್ ಆನ್ ಅಧ್ಯಯನಕ್ಕೆ ಮೀಸಲಾಗಿಡಬೇಕು. ಇದರಿಂದ ನಮಗೆ ಅಲ್ಲಾಹನ ಸಂಪ್ರೀತಿ ದೊರಕುವುದು. ಈ ಎಲ್ಲಾ ಗುಣಗಳನ್ನು ಮೈಗೂಡಿಸಿ ಕೊಳ್ಳಲು ರಮ ಝಾನ್ ಮಾಸ ಸೂಕ್ತವಾಗಿದೆ. ಹೀಗೆ ನಾವು ಮಾಡಿದರೆ ರಮ ಝಾನ್ ಮಾಸದ ಪುಣ್ಯಗಳನ್ನು ಪಡೆದು ಕೊಳ್ಳಬಹುದು. ಅದಕ್ಕಾಗಿ ಈ ಮಾಸ ದ ಸ್ವಾಗತಕ್ಕಾಗಿ ನಾವು ಸಿದ್ದರಾಗಿರಬೇಕು ಎಂದು ಹೇಳಿದರು.

ಇನೊರ್ವ ಮುಖ್ಯ ಅತಿಥಿಯಾಗಿರುವ ಎಸ್. ಐ. ಓ. ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರ್ ರವರು,
ಕುರ್ ಆನ್ ದೇವನ ವತಿಯಿಂದ ಬಂದ ಗ್ರಂಥವಾಗಿದ್ದು, ಅದು ಜನರಿಗೆ ದೀಪಸ್ತOಭ ದಂತೆ ಕತ್ತಲೆಯಲ್ಲಿ ಇರುವವರಿಗೆ ದಾರಿ ತೋರಿಸುವ ಕೆಲಸ ಮಾಡುತ್ತದೆ.

ಇದರ ಸದುಪಯೋಗ ಪಡೆದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ.
ಈ ಕುರ್ ಆನ್ ಅವತ್ತೀರ್ಣಗೊಂಡ್ಡದ್ದು ರಮ ಝಾನ್ ಮಾಸದಲ್ಲಿ ಆಗಿದ್ದು, ರಮ ಝಾನ್ ಮಾಸ ಜನರನ್ನು ಒಳಿತಿನತ್ತ ಕೊಂಡೋಯ್ಯುತ್ತದೆ.

ಆದ್ದರಿಂದ ಕುರ್ ಆನ್ ನೊಂದಿಗೆ ಗಾಢ ಸಂಬಂಧ ಇಟ್ಟುಕೊಳ್ಳಬೇಕು. ಅದಕ್ಕಾಗಿಯೇ ಸಮಯ ಸೂಚಿ ಸಿದ್ದಪಡಿಸಿ ಅದರ ಪಠಣ, ಅನುವಾದ, ವಾಖ್ಯಾನದ ಅಧ್ಯಯನ ಮಾಡಬೇಕು. ಮತ್ತು ಇಂದಿನ ದಿನಗಳಲ್ಲಿ ಮೊಬೈಲ್ ಹಾವಳಿ ಜಾಸ್ತಿ ಆಗಿದ್ದು, ಅದನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಈ ಮಾಸದಲ್ಲಿ ಪಣ ತೊಟ್ಟಿಕೊಳ್ಳಬೇಕು ಎಂದು ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಯವರು ಜಮಾ ಅತೆ ಇಸ್ಲಾಮಿ ಹಿಂದ್ ಮತ್ತು ಎಸ್. ಐ. ಓ. ನ ದ್ಯೇಯೋದ್ದೇಶ ಹಾಗೂ ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಕಾರ್ಯ ಯೋಜನೆ ಯ ಬಗ್ಗೆ ಮತ್ತು ರಮ ಝಾನ್ ಮಾಸದ ಸ್ವಾಗತ ಯಾಕಾಗಿ ಎಂದು ವಿವರಿಸುತ್ತಾ ಪ್ರಾಸ್ತವಿಕವಾಗಿ ಮಾತಾಡಿ ಅತಿಥಿಗಳನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು.

ಹಾಫಿಜ್ ಎ ಕುರ್ ಆನ್ ಒಬಾದ ಜರ್ರಾರ್ ರವರ ಕುರ್ ಆನ್ ಪಠನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ವೇದಿಕೆಯಲ್ಲಿ ಜಾಮಿಯ ಮಸ್ಜಿದ್ ಜದೀದ್ ಕಲಾನ್ ನ ಅಧ್ಯಕ್ಷರು ಜನಾಬ್ ಶಭಿ ಅಹಮದ್ ಕಾಝಿ ಉಪಸ್ಥಿತರಿದ್ದರು.
ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದ ನೀಡಿದರು.
ಎಸ್. ಐ.ಓ. ಸದಸ್ಯ, ಅಬ್ದುಲ್ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು.

Back to top button