
ಉಡುಪಿ ಕಂಬಳ ವಿವಾದ: ರಾಜಕೀಯ ಆರೋಪ ಪ್ರತ್ಯಾರೋಪ
ಕಂಬಳ ಕರೆಯ ಭೂಮಿ ಪೂಜೆ ಕಾನೂನು ಬಾಹಿರ: ವಿನಯ ಕುಮಾರ್ ಸೊರಕೆ
ಸೊರಕೆಯಿಂದ ಚಿಲ್ಲರೆ ರಾಜಕಾರಣ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ: ೮೦ ಬಡಗುಬೆಟ್ಟುವಿನಲ್ಲಿ ನಡೆಯಲಿರುವ ಉಡುಪಿ ಕಂಬಳದ ಭೂಮಿ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನಡುವೆ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡಿವೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಂಬಳ ಕರೆಯ ೬.೩೦ ಎಕರೆ ಭೂಮಿಯನ್ನು ಜಿ¯್ಲಾ ಆಡಳಿತ ಕಂಬಳ ಸಮಿತಿಗೆ ಹಸ್ತಾಂತರಿಸಿಲ್ಲ. ಆದ್ದರಿಂದ ಫೆ.೨೮ರಂದು ಶಾಸಕರ ನೇತೃತ್ವದಲ್ಲಿ ನಡೆದ ಭೂಮಿ ಪೂಜೆ ಕಾನೂನುಬಾಹಿರ ಎಂದು ಆರೋಪಿಸಿದರು.
ಉಡುಪಿ ಕಂಬಳ ನಡೆಯುವುದಕ್ಕೆ ತನ್ನ ವಿರೋಧವಿಲ್ಲ. ಆದರೆ ಅದು ಬಿಜೆಪಿ ಪಕ್ಷದ ಕಂಬಳವಾಗಬಾರದು; ಜಿ¯್ಲಾ ಆಡಳಿತದ ವತಿಯಿಂದ ನಡೆಯಬೇಕು ಎಂದು ಹೇಳಿದರು. ಸ್ಥಳೀಯರಿಗೆ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಜನಪ್ರತಿನಿಧಿಗಳು ಜಿ¯್ಲಾ ಆಡಳಿತದ ನಿಷೇಧಾಜ್ಞೆ ಉಲ್ಲಂಘಿಸಿ ಶಂಕುಸ್ಥಾಪನೆ ನಡೆಸಿದ್ದಾರೆ. ತಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ಶಾಸಕರು ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾನೂನುಬಾಹಿರ ಜೂಜು ನಡೆಸುವ ಹಿಂಬಾಲಕರಿಗಾಗಿ ಈ ಕಂಬಳ ನಡೆಸಲಾಗುತ್ತಿದೆ ಎಂದು ಸೊರಕೆ ದೂರಿದರು.
ಬಡಗುಬೆಟ್ಟು ಪಂಚಾಯತ್ನಲ್ಲಿ ಬಡವರಿಗೆ ಐದು ಸೆಂಟ್ಸ್ ಭೂಮಿ ನೀಡದ ಶಾಸಕರು, ಅರಣ್ಯ ಇಲಾಖೆಯ ೬.೩೦ ಎಕರೆ ಭೂಮಿಯಲ್ಲಿ ಕಂಬಳ ಮಾಡಲು ಮುಂದಾಗಿದ್ದಾರೆ. ಅರಣ್ಯ ಕಾಯ್ದೆ ಉಲ್ಲಂಘನೆ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ ಎಂದರು.
೪೦ ವರ್ಷಗಳಿಂದ ೧೦ ಕುಟುಂಬಗಳು ಕೃಷಿ ಮಾಡಿಕೊಂಡು ವಾಸಿಸುತ್ತಿದ್ದು, ಅವರಿಗೆ ಕಂಬಳದಿಂದ ತೊಂದರೆ ಆಗುತ್ತಿದೆ. ಈ ಬಗ್ಗೆ ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಸಮಸ್ಯೆಯನ್ನು ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಮಾ.೪ರಂದು ಜಿ¯್ಲಾ ಆಡಳಿತದಿಂದ ನಡೆಸಲು ಉದ್ದೇಶಿಸಿದ್ದ ಶಂಕುಸ್ಥಾಪನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
________________________________________
ಸೊರಕೆ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ: ಗುರ್ಮೆ ಸುರೇಶ್ ಶೆಟ್ಟಿ
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಸೊರಕೆ ಕಾಪು ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಪಡಿಸಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಪು ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳನ್ನು ಬಳಸಿ ಸರ್ಕಾರದ ಮೂಲಕ ಒತ್ತಡ ಹಾಕಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಹೇಳಿದರು.
೬ ತಿಂಗಳ ಹಿಂದೆಯೇ ಎಸಿ, ಡಿಸಿ ಸೇರಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ಗಡಿ ಗುರುತು ಮಾಡಿ ೬.೩೦ ಎಕರೆ ಭೂಮಿಯನ್ನು ಯುವಜನ ಸಬಲೀಕರಣ ಇಲಾಖೆಗೆ ಮಂಜೂರು ಮಾಡಲಾಗಿದೆ. ಪಕ್ಷಾತೀತವಾಗಿ ಕಂಬಳ ಸಮಿತಿ ರಚಿಸಿ ಉಸ್ತುವಾರಿ ಸಚಿವರಿಂದಲೇ ಒಪ್ಪಿಗೆ ಪಡೆಯಲಾಗಿದೆ ಎಂದರು.
ಕೊನೆಯ ಕ್ಷಣದಲ್ಲಿ ಸೊರಕೆ ಒತ್ತಡ ಹಾಕಿ ಕಂಬಳ ನಿಲ್ಲಿಸಲು ಕುತಂತ್ರ ರಾಜಕೀಯ ನಡೆಸುತ್ತಿದ್ದಾರೆ. ಕರಾವಳಿಯ ಬಗ್ಗೆ ಅಸಡ್ಡೆ ಹಾಗೂ ಅನುದಾನದ ಅಭಾವ ಮಂತ್ರಿಗಳ ಮಲತಾಯಿ ಧೋರಣೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
________________________________________
ಭೂಮಿಪೂಜೆ ಮಾಡಿದರೆ ಹೋರಾಟ: ಸುನಿಲ್ ಕುಮಾರ್
ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಂಬಳ ನಡೆಯಬಾರದು ಹಾಗೂ ಅದರ ಕೀರ್ತಿ ಗುರ್ಮೆ ಸುರೇಶ್ ಶೆಟ್ಟಿಗೆ ಸಿಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ನ ಪರಾಜಿತ ಅಭ್ಯರ್ಥಿಗಳು ಅಧಿಕಾರಿಗಳ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಂಬಳ ನೆಪ ಮಾತ್ರ; ಜನಪರ ಚಟುವಟಿಕೆ ನಡೆಯಬಾರದು ಎಂಬುದು ಕಾಂಗ್ರೆಸ್ನ ಹಿಡನ್ ಅಜೆಂಡಾ ಎಂದು ಅವರು ಕಿಡಿಕಾರಿದರು. ಅಧಿಕಾರಿಗಳು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳ ಕೈಗೊಂಬೆಗಳಂತೆ ಕೆಲಸ ಮಾಡುವುದನ್ನು ಸಹಿಸುವುದಿಲ್ಲ ಎಂದರು.
ಉಡುಪಿ ಕಂಬಳಕ್ಕೆ ಅನುದಾನ ನೀಡುವುದು ಸರ್ಕಾರದ ನಿರ್ಧಾರ. ಸರ್ಕಾರ ಅನುದಾನ ನೀಡಲಿ ಅಥವಾ ಬಿಡಲಿ, ಕಂಬಳ ಸಮಿತಿ ಕಾರ್ಯಕ್ರಮ ನಡೆಸುತ್ತದೆ. ಮತ್ತೆ ಭೂಮಿಪೂಜೆ ತಡೆದರೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.




