
Udupi
ನಾಯರ್’ಕೆರೆ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ
ಬ್ರಹ್ಮಗಿರಿ ನಾಯರ್ ಕೆರೆ ಹಾಶ್ಮಿ ಮಸೀದಿಯಲ್ಲಿ ಈದ್ ಸಂದೇಶ ನೀಡಿದ ಇಮಾಮ್ ಉಬೇದು ರಹಮಾನ್ ನದ್ವಿ “ಪೋಷಕರು ತಮ್ಮ ಮಕ್ಕಳನ್ನು ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಇಂದು ಅತಿ ವೇಗ ಅಜಾಗ್ರತೆ ವಾಹನ ಚಲಾವಣೆಯ ಪರಿಣಾಮ ರಸ್ತೆ ಅಪಘಾತಕ್ಕೆ ಯುವಜನತೆ ಬಲಿಯಾಗುತ್ತಿದ್ದು ಈ ಬಗ್ಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಎಲ್ಲರೊಂದಿಗೆ ಬೆರೆತು ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು” ಎಂದರು
ಈ ಸಂದರ್ಭದಲ್ಲಿ ಧರ್ಮ ಗುರುಗಳು ತಮ್ಮ ಈ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಿಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸಿದರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರ ರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.







