
Uttara Kannada
ಪ್ಲಾಸ್ಟಿಕ್ ಸೇವನೆಯಿಂದ ಹಾಕ್ಸ ಬಿಲ್ ಪ್ರಬೇಧದ ಕಡಲಾಮೆ ಸಾವು
ಕಾರವಾರ : ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೃತ ಸ್ಥಿತಿಯಲ್ಲಿ ಹಾಕ್ಸ ಬಿಲ್ ಟೊರಟೈಜ್ ಮಂಗಳವಾರ ಪತ್ತೆಯಾಗಿದೆ. ಹಾಕ್ಸ ಬಿಲ್ ಪ್ರಬೇಧದ ಆಮೆ ವಯಸ್ಸು 35 ರಿಂದ 40 ವರ್ಷ ಎಂದು ಕುಂದಾಪುರದಿಂದ ಆಗಮಿಸಿದ ಕಡಲಾಮೆ ತಜ್ಞ ವೈದ್ಯರು ಹೇಳಿದ್ದಾರೆ.
ಕೋಸ್ಟಲ್ ಮರೈನ್ ಇಕೋ ಸಿಸ್ಟಮ್ ಸೆಲ್ ಕಾರವಾರ ವಲಯದ ವಲಯ ಅರಣ್ಯಾಧಿಕಾರಿಗಳು ಹಾಗೂ ಅಮೆ ತಜ್ಞರು ಕಡಲತೀರಕ್ಕೆ ಭೇಟಿ ನೀಡಿ ಮೃತ ಆಮೆಯ ವೈದ್ಯಕೀಯ ಪರೀಕ್ಷೆ ನಡೆಸಿದರು.
ನಂತರ ಮೇಲಾಧಿಕಾರಿಗಳ ನಿರ್ದೇಶನದಂತೆ ಹಾಕ್ಸ ಬಿಲ್ ಆಮೆಯನ್ನು ಮರಳಲ್ಲಿ ಹೂಳಲಾಯಿತು. ಆಮೆಯ ಕರಳುಗಳಲ್ಲಿ ಪ್ಲಾಸ್ಟಿಕ್ ಕಂಡುಬಂದಿದ್ದು, ಪ್ಲಾಸ್ಟಿಕ್ ಸೇವನೆಯಿಂದ ಸಾವು ಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆಲೀವ್ ರಿಡ್ಲೆ ಜಾತಿಯ ಆಮೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಾಕ್ಸ ಬಿಲ್ ಪ್ರಬೇಧ ಆಮೆ ಅರಬ್ಬೀ ಸಮುದ್ರದಲ್ಲಿ ಕಾಣುವುದು ವಿರಳ. ಎರಡು ವರ್ಷದ ಹಿಂದೆ ಗಾಯಗೊಂಡ ಸ್ಥಿತಿಯಲ್ಲಿ ಹಾಕ್ಸ ಬಿಲ್ ಆಮೆ ಕಾಣಿಸಿತ್ತು.
….




