Featured StoryState News

HRS ತರಬೇತಿ ಶಿಬಿರ

ಅರೆಹಳ್ಳಿ, ಮೇ 10: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ಸ್ವಯಂಸೇವಕರಿಗಾಗಿ 3ನೇ ಹಂತದ ತರಬೇತಿ ಶಿಬಿರವನ್ನು ಮಸ್ಜಿದ್ ಎ ಹೀರಾ, ಅರೆಹಳ್ಳಿಯಲ್ಲಿ ಆಯೋಜಿಸಲಾಗಿತ್ತು. ಒಟ್ಟು ಹತ್ತು ದಿನಗಳ ಈ ತರಬೇತಿ ಕಾರ್ಯಕ್ರಮವನ್ನು ಮೂರು ಹಂತಗಳಲ್ಲಿ ನಡೆಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಸ್ವಯಂಸೇವಕರು ಶಿಬಿರದಲ್ಲಿ ಭಾಗವಹಿಸಿದ್ದರು.

Screenshot 2026 05 11 12 06 58 633 com.whatsapp edit Featured Story, State News

ಈಗಾಗಲೇ ಪರಿಣತಿ ಹೊಂದಿರುವ HRSನ ತರಬೇತುದಾರರು ಶಿಬಿರವನ್ನು ಮುನ್ನಡೆಸಿದರು. ಶಿಬಿರದಲ್ಲಿ ಪ್ರಥಮ ಚಿಕಿತ್ಸೆ, ಪಾರುಗಾಣಿಕೆ ಕಾರ್ಯ, ಅಪಘಾತ, ಬೆಂಕಿ ಹಾಗೂ ನೀರು ಸಂಬಂಧಿತ ಅವಘಡಗಳು ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಕಮಾಂಡರ್ ಅಮೀರ್ ಸಿದ್ದೀಕಿ, ಸಹ ಕಮಾಂಡರ್ ಅಬ್ರಾರ್ ಅಹ್ಮದ್, ಕ್ಯಾಪ್ಟನ್ ಮುನೀರ್, ರಫಿಯುದ್ದೀನ್, ಟ್ರೈನರ್ ಮಹಮ್ಮದ್ ಸಲಿಮ್, ಮಹಮ್ಮದ್ ಬಿಲಾಲ್ ಹಾಗೂ ಝುಬೈರ್ ಮಲ್ಪೆ ಮುಂತಾದವರು ತರಬೇತಿಯನ್ನು ನೀಡಿದರು.

Back to top button