
Featured StoryUdupi
ಕಾರ್ಕಳ: ಬಾವಿಯಿಂದ ಮೂವರ ರಕ್ಷಣೆ
ಕುಕ್ಕುಂದೂರು ಗ್ರಾಮದ ಅಶ್ವತ್ಥಪುರ ಸಮೀಪ ಮೇ 10ರಂದು ಬಾವಿಯ ಮಣ್ಣು ತೆಗೆಯುವ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಬಾವಿಗೆ ಬಿದ್ದ ಘಟನೆ ಸಂಭವಿಸಿದೆ. ಸ್ಥಳೀಯರಾದ ರಾಜೇಶ್ (42), ಪವನ್ (29) ಹಾಗೂ ಗೋಪಾಲ ನಾಯ್ಕ್ (52) ಬಾವಿಯಲ್ಲಿ ಸಿಲುಕಿಕೊಂಡಿದ್ದು, ಮಾಹಿತಿ ತಿಳಿದ ತತ್‌ಕ್ಷಣ ಕಾರ್ಕಳ ಅಗ್ನಿಶಾಮಕ ಠಾಣೆ ಸಿಬಂದಿ ಸ್ಥಳಕ್ಕೆ ಧಾವಿಸಿ ಸೂಕ್ತ ಪರಿಕರಗೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಸ್ವಸ್ಥಗೊಂಡಿದ್ದ ಮೂವರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ಕಾರ್ಕಳ ಠಾಣಾಧಿಕಾರಿ ಆಲ್ಬರ್ಟ್ ಮೊನಿಸ್ ನೇತೃತ್ವದಲ್ಲಿ ರೂಪೇಶ್, ಸುರೇಶ್, ಮುಜಾಮಿಲ್, ದಿನೇಶ್, ಗಣೇಶ್ ಹಾಗೂ ನಿತ್ಯಾನಂದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




