
Udupi
ಕೋಡಿಬೆಂಗ್ರೆ ಜಾಮಿಯಾ ಮಸೀದಿಯಲ್ಲಿ ಎಸ್.ಐ.ಆರ್ ಪ್ರಾಯೋಗಿಕ ಕಾರ್ಯಾಗಾರ
ಕೋಡಿಬೆಂಗ್ರೆ ಜಾಮಿಯಾ ಮಸೀದಿಯಲ್ಲಿ ಎಸ್ಐಆರ್ (Special Intensive Revision) ಎಣಿಕೆ ನಮೂನೆ (Enumeration Form) ಭರ್ತಿ ಕುರಿತು ಜಾಗೃತಿ ಹಾಗೂ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿ ವಕ್ತಾರರಾಗಿ ಕಾನೂನು ವಿದ್ಯಾರ್ಥಿ ಶೇಖ್ ಆಯಾನ್ ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವರು ಮತದಾರರ ಪಟ್ಟಿಯ ಪರಿಷ್ಕರಣೆಯ ಮಹತ್ವ, ಎಣಿಕೆ ನಮೂನೆ ಭರ್ತಿಯ ವಿಧಾನ, ಅಗತ್ಯ ದಾಖಲೆಗಳು ಹಾಗೂ ನಾಗರಿಕರ ಜವಾಬ್ದಾರಿಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಭಾಗವಹಿಸಿದವರಿಗೆ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡುವ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಲಾಯಿತು. ಸ್ಥಳೀಯ ನಿವಾಸಿಗಳು, ಯುವಕರು ಹಾಗೂ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಮಸೀದಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.




