
ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಧಾಖಲಿಸುವಿಕೆ ಮತ್ತು ಶಾಂತಿಪೂರ್ಣ ವಿಧ್ಯಾರ್ಥಿ ಪ್ರತಿಭಟನೆಯ ಮೇಲೆ ಬಲಪ್ರಯೋಗದ ಮೂಲಕ ಹತ್ತಿಕ್ಕುವ ಪ್ರಯತ್ನ ಖಂಡನೀಯ. — ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಉಡುಪಿ 19 ಜುಲೈ 2026: ಪ್ರಜಾತಾಂತ್ರಿಕ ವಿಧಾನದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಶ್ರೀ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿರುವುದು ಮತ್ತು ಚಳುವಳಿ ನಿರತ ವಿಧ್ಯಾರ್ಥಿಗಳ ಮೇಲೆ ವ್ಯವಸ್ಥೆ ಬಲಪ್ರಯೋಗವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.
ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಹಾಗೂ ಸತ್ಯಾಗ್ರಹ ನಡೆಸುವುದು ಭಾರತದ ಸಂವಿಧಾನದ ವಿಧಿ 19(1)(a) ಮತ್ತು 19(1)(b) ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ.
ಭಿನ್ನಾಭಿಪ್ರಾಯದ ಧ್ವನಿಗಳನ್ನು ಬಲಪ್ರಯೋಗದ ಮೂಲಕ ಮಣಿಸುವ ಪ್ರಯತ್ನವನ್ನು ಮೋದಿ ಸರ್ಕಾರವು ಇತ್ತಿಚೆಗೆ ನಿರಂತರವಾಗಿ ನಡೆಸುತ್ತಾ ಬಂದಿದೆ. ಶಾಹೀನ್ ಬಾಗ್ ಸಿ.ಎ.ಎ ವಿರೋಧಿ ಹೋರಾಟ, ರೈತರ ಪ್ರತಿಭಟನೆ ಹಾಗೂ ಕುಸ್ತಿಪಟುಗಳ ಹೋರಾಟಗಳಲ್ಲಿಯೂ ಇದೇ ರೀತಿಯ ಇದೆ ರೀತಿಯ ಧೋರಣೆಯನ್ನು ಅನುಸರಿಸಿದೆ. ಇದು ಸರಕಾರವು ಪ್ರಜೆಗಳ ಮೇಲಿನ ತನ್ನ ಮರ್ದನವನ್ನು ಸಾಮಾನ್ಯಿಕರಿಸಲು ಹೊರಟಂತೆ ತೋರುತ್ತಿದೆ. ಇದು ಸರ್ಕಾರದ ಅಸಹಿಷ್ಣು ಧೋರಣೆ ಮತ್ತು ಸರ್ವಾಧಿಕಾರಿ ಮನೋಭಾವವನ್ನು ತೋರಿಸುವುದರ ಜೊತೆಗೆ, ದೇಶದ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ಆಕ್ರಮಣವಾಗಿದೆ.
ಶ್ರೀ ಸೋನಂ ವಾಂಗ್ಚುಕ್ ಅವರು ಶಿಕ್ಷಣ ಸುಧಾರಣೆ, ಹವಾಮಾನ ಬದಲಾವಣೆ ಹಾಗೂ ಆದಿವಾಸಿಗಳ ಹಕ್ಕುಗಳ ರಕ್ಷಣೆಯಂತಹ ಮಹತ್ವದ ವಿಷಯಗಳ ಬಗ್ಗೆ ನ್ಯಾಯಸಮ್ಮತ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಧ್ವನಿಗೆ ಸಂವಾದದ ಬದಲಿಗೆ ಬಲವಂತ ಮತ್ತು ದಹನಕಾರಿ ನೀತಿಯನ್ನು ಅನುಸರಿಸುದರ ಮೂಲಕ ಪ್ರತಿಕ್ರಿಯಿಸುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷರು ಹೇಳಿಕೆ ನೀಡಿದ್ದಾರೆ.
ಶ್ರೀ ಸೋನಂ ವಾಂಗ್ಚುಕ್ , ವಿಧ್ಯಾರ್ಥಿಗಳು ಹಾಗೂ ಇತರರು ಪ್ರಜಾತಾಂತ್ರಿಕ ಮಾರ್ಗಗಳ ಮೂಲಕ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು , ಸತ್ಯವನ್ನು ಹೇಳುವುದು ಅಪರಾಧವಲ್ಲ, ಅದನ್ನು ನಾಗರಿಕರ ಕರ್ತವ್ಯ ಎಂದು ನಂಬುವ ಪ್ರತಿಯೊಬ್ಬ ನಾಗರಿಕರೊಂದಿಗೆ ಸಂಪೂರ್ಣ ಸಹಮತವನ್ನು ವೆಲ್ಫೇರ್ ಪಾರ್ಟಿ ವ್ಯಕ್ತಪಡಿಸುತ್ತದೆ ಮತ್ತು ಬೆಂಬಲಿಸುತ್ತದೆ ಎಂದು ವೆಲ್’ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾಧ್ಯಕ್ಷರಾದ ಇದ್ರೀಸ್ ಹೂಡೆ ಹೇಳಿಕೆ ನೀಡಿರುವುದಲ್ಲದೆ , ವಿದ್ಯಾರ್ಥಿಗಳು ,ಮಾನವ ಹಕ್ಕು ಹೋರಾಟಗಾರರು ಹಾಗೂ ಎಲ್ಲಾ ಪ್ರಜಾಪ್ರಭುತ್ವ ಪರ ಸಂಘಟನೆಗಳು ಈ ಸರ್ವಾಧಿಕಾರಿ ಕ್ರಮದ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿದ್ದಾರೆ.
ಬೇಡಿಕೆಗಳು
1. ಶ್ರೀ ಸೋನಂ ವಾಂಗ್ಚುಕ್ ಹಾಗೂ ಬಂಧನಕ್ಕೊಳಗಾಗಿರುವ ಎಲ್ಲಾ ಪ್ರತಿಭಟನಾಕಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
2. ಸರ್ಕಾರವು ದಮನದ ಮಾರ್ಗವನ್ನು ಬಿಟ್ಟು, ಸೋನಂ ವಾಂಗ್ಚುಕ್, ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದೊಂದಿಗೆ ಸಂವಾದ ನಡೆಸಬೇಕು.
3. ಕೇಂದ್ರ ಶಿಕ್ಷಣ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.
4. ಶಾಂತಿಯುತ ಪ್ರತಿಭಟನೆಯನ್ನು ಅಪರಾಧೀಕರಿಸುವ ಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಭಿನ್ನಾಭಿಪ್ರಾಯವು ರಾಷ್ಟ್ರವಿರೋಧವಲ್ಲ; ಅದು ಪ್ರಜಾಪ್ರಭುತ್ವದ ಆತ್ಮವಾಗಿದೆ.
5. ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಮಾಫಿಯಾಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಉದ್ಯಾವರ ಆಗ್ರಹಿಸಿದ್ದಾರೆ.




