Featured StoryUttara Kannada

ಅನುಚಿತ ವರ್ತನೆ : ಮೂವರು ಹೆಡ್ ಕಾನ್ ಸ್ಟೇಬಲ್ಸ ಅಮಾನತ್

ಕಾರವಾರ : ಶಿರಸಿ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ದೇವೇಂದ್ರ ನಾಯ್ಕ್ ಅವರಿಗೆ ಬೆದರಿಕೆ ಹಾಕಿದ ಹಾಗೂ ಕರ್ತವ್ಯ ನಿರ್ವಹಣೆ ವೇಳೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಠಾಣೆಯ ಮೂವರು ಹೆಡ್ ಕಾನ್ ಸ್ಟೇಬಲ್‌ಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಅಮಾನತ್ ಮಾಡಿದೆ. ಅಮಾನತುಗೊಂಡವರನ್ನು ಹೆಡ್ ಕಾನ್ಸ್ಟೇಬಲ್‌ಗಳಾದ ಚಂದ್ರಪ್ಪ ಆರ್. ಕೊರವರ, ಜಿಮ್ಮು ಶಿಂಧೆ ಹಾಗೂ ಬಂಗಾರಪ್ಪ ಒಣಿಕೇರಿ ಎಂದು ಗುರುತಿಸಲಾಗಿದೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಮೂವರು ಸಿಬ್ಬಂದಿ, ಪಿಎಸ್ಐ ದೇವೇಂದ್ರ ನಾಯ್ಕ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಬೆದರಿಕೆ ಹಾಕಿರುವುದಲ್ಲದೆ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೂವರ ವಿರುದ್ಧ ಅಮಾನತು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Back to top button