Crime

ಕೋವಿಡ್-19 ಸೋಂಕಿತರಿಗೆ ತಿಂಗಳುಗಟ್ಟಲೆ ಚಿಕಿತ್ಸೆ ಮತ್ತು ಆರೈಕೆಯಲ್ಲಿ ತೊಡಗಿದ್ದ 30 ವರ್ಷದ ವೈದ್ಯ ಡಾ. ಶುಭಮ್ ಸಾಂಕ್ರಾಮಿಕಕ್ಕೆ ಬಲಿ

ಭೋಪಾಲ್,ನ 26(ಯುಎನ್ಐ)-ಭಾರತದಲ್ಲಿ ಕೋವಿಡ್‍-19 ವಿರುದ್ಧದ ಹೋರಾಟ ಯಶಸ್ವಿಯಾಗುವುದರ ನಡುವೆ ಅದಮ್ಯ ಧೈರ್ಯ, ಸಂಪೂರ್ಣ ತ್ಯಾಗದ ವೈದ್ಯಕೀಯ ವೃತ್ತಿಪರರು, ಕಾನೂನು ಜಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಇತರರು ಸಾಂಕ್ರಾಮಿಕಕ್ಕೆ ಬಲಿಯಾಗುತ್ತಿರುವುದು ದುರಂತವೆಂದೇ ಹೇಳಬಹುದು.
ಒಂದು ಮನಕಲುಕುವ ಉದಾಹರಣೆಯೆಂದರೆ, ಮಧ್ಯಪ್ರದೇಶದ ಸಾಗರ್ ಮೂಲದ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ತಿಂಗಳುಗಟ್ಟಲೆ ಚಿಕಿತ್ಸೆ ಮತ್ತು ಆರೈಕೆಯಲ್ಲಿ ತೊಡಗಿದ್ದ ಸುಮಾರು 30 ವರ್ಷದ ವೈದ್ಯ ಡಾ. ಶುಭಮ್ ಉಪಾಧ್ಯಾಯ ಸೋಂಕಿಗೆ ಬಲಿಯಾಗಿದ್ದಾರೆ.
ಇತ್ತೀಚೆಗೆ ಸೋಂಕಿಗೆ ತುತ್ತಾಗಿದ್ದ ಉಪಾಧ್ಯಾಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಪ್ರದೇಶ ರಾಜಧಾನಿಯಾದ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button