Crime

ವಿಜಯಪುರ: ಪಾಸ್‌ಪೋರ್ಟ್ ಹೆಸರಿನಲ್ಲಿ ಸಾವಿರಾರು ನಗದು ವಂಚನೆ

ವಿಜಯಪುರ: ಪಾಸ್‌ಪೋರ್ಟ್ ಹೆಸರಿನಲ್ಲಿ ಸಾವಿರಾರು ನಗದು ವಂಚನೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.


ವಸಂತಕುಮಾರಿ ಜೆ ಎಂಬುವರ ವಂಚನೆಗೆ ಒಳಗಾದವರು. ಇನ್ನು ಆನ್‌ಲೈನ್ ಮೂಲಕ ಅನಾಮಧೇಯ ವ್ಯಕ್ತಿ ಕರೆ ಮಾಡಿ ನಿಮ್ಮ ಪಾಸ್‌ಪೋರ್ಟ್ ಕಳುಹಿಸಲಾಗುತ್ತಿದೆ. ಅದಕ್ಕಾಗಿ ನೀವು ಆನ್‌ಲೈನ್ ಮೂಲಕ 5 ರೂ. ನಗದು ಭರ್ತಿ ಮಾಡಬೇಕು ಎಂದು ಕರೆಯಲ್ಲಿ ತಿಳಿಸಿದ್ದಾರೆ. ಆ ಮೂಲಕ ಐದು ರೂಪಾಯಿ ನಗದು ಕಟ್ಟಿದ ಮೇಲೆ 20 ಸಾವಿರ, 15 ಸಾವಿರ ಹೀಗೆ 99,703 ನಗದು ವಂಚನೆ ಮಾಡಿದ್ದಾರೆ.
ಈ ಕುರಿತು ವಿಜಯಪುರ ಸಿಇಎನ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button