Crime

ಕೊರೋನ ಲಸಿಕೆ ತಯಾರಿಕೆ, ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಹೇಳಿದ್ದೇನು..?

ನವದೆಹಲಿ, ಜನವರಿ 3 (ಯುಎನ್‍ಐ):- ದೇಶದಲ್ಲಿ ತಯಾರಾದ ಎರಡು ಕೊರೊನಾ ಲಸಿಕೆಯ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿರುವುದು ಹೆಮ್ಮೆ ವಿಚಾರ, ಸದ್ಯ ದೇಶ ಕೊರೊನಾ ಮುಕ್ತ ಹಾದಿಯಲ್ಲಿ ವೇಗದ ಹೆಜ್ಜೆ ಹಾಕಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಲಸಿಕೆ ತಯಾರಿಕೆಗಾಗಿ ಹಗಲೂ –ಇರುಳು ಶ್ರಮಿಸಿದ ವಿಜ್ಞಾನಿಗಳು, ವೈದ್ಯಕೀಯ ಸಮುದಾಯಕ್ಕೆ ಮೋದಿ ಮನಸಾರೆ ಅಭಿನಂದನೆ ಸಲ್ಲಿಸಿದ್ದಾರೆ. ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಬಳಕೆ ಮಾಡಲು ಅಡ್ಡಿಯಿಲ್ಲ ಎಂದು ತಜ್ಞರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸು ಮಾಡಿತ್ತು. ಡಿಸಿಜಿಐ ಆಕ್ಸ್ಫಡ್ರ್ನ ಕೊರೊನಾ ಲಸಿಕೆ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದೆ.
ತುರ್ತು ಬಳಕೆಗೆ ಅನುಮತಿ ನೀಡಿದ ಎರಡು ಕೊರೊನಾ ಲಸಿಕೆಗಳು ಭಾರತದಲ್ಲಿ ತಯಾರಿಸಲಾಗಿದೆ ಎನ್ನುವುದು ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು. ಸೋಂಕಿನ ಜತೆ ಹೋರಾಟ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ. ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ನ ಲಸಿಕೆಗಳಿಗೆ ಡಿಸಿಜಿಐ ಅನುಮತಿ ನೀಡಿರುವುದು ಆರೋಗ್ಯಕರ ಮತ್ತು ಕೊರೊನಾ ಮುಕ್ತ ರಾಷ್ಟ್ರದ ಹಾದಿಯನ್ನು ವೇಗಗೊಳಿಸಲಿದೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button