Dakshina KannadaElectionFeatured Story

ಉಳ್ಳಾಲ ಕ್ಷೇತ್ರ: ಯುಟಿ ಕಾದರ್‌ ಅವರನ್ನು ಸೋಲಿಸಲು ಎಸ್.ಡಿ.ಪಿ.ಐ, ಬಿಜೆಪಿಗೆ ಸಾಧ್ಯವೇ? – ವಿಶ್ಲೇಷಣೆ

ವಿಶ್ಲೇಷಣೆ: ವೈ.ಎನ್.ಕೆ

ಉಳ್ಳಾಲ: ಉಳ್ಳಾಲ ಕ್ಷೇತ್ರ ಈ ಬಾರಿ ಬಹಳ ಚರ್ಚೆಯಲ್ಲಿದೆ. ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೇಸ್‌ ಪಕ್ಷದ ಪ್ರಭಾವಿ ನಾಯಕ ಯುಟಿ ಕಾದರ್‌ ಸೋಲಿಸಲು ಎದುರಾಳಿಗಳು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಬಿಜೆಪಿ ಮತ್ತು ಎಸ್.ಡಿ.ಪಿ.ಐ ಈ ಕ್ಷೇತ್ರದಲ್ಲಿ ಅವರ ವಿರುದ್ಧ ಕಣಕ್ಕಿಳಿಯಲಿದ್ದು ಎರಡೂ ಪಕ್ಷಗಳು ಕಾಂಗ್ರೇಸನ್ನು ಸೋಲಿಸಲು ಪಣ ತೊಟ್ಟಿದೆ.


ಈ ಭಾಗದಲ್ಲಿ ಯುಟಿ ಕಾದರ್‌ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಅವರನ್ನು ಸೋಲಿಸಲು ಅಷ್ಟೊಂದು ಸುಲಭವಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಮತ ವಿಭಜನೆಯಿಂದ ಅವರನ್ನು ಹಣಿಯಲು ಬಿಜೆಪಿ ಮತ್ತು ಎಸ್.ಡಿ.ಪಿ.ಐ ಪ್ರಯತ್ನಿಸುತ್ತಿದೆ.


ಈ ಕ್ಷೇತ್ರದಲ್ಲಿ ಸರಿ ಸುಮಾರು ಎರಡು ಲಕ್ಷ ಮತದಾರರಿದ್ದು ಬಹು ಸಂಖ್ಯಾತರು ಮುಸ್ಲಿಮರು. ಅಂದಾಜು 80 ಸಾವಿರ ಮತಗಳು ಮುಸ್ಲಿಮ್‌ ಸಮುದಾಯದಿದೆ. ಇನ್ನುಳಿದಂತೆ ಬಿಲ್ಲವರ ಮತ ಅಂದಾಜು 35 ಸಾವಿರ, ಬಂಟರು 25 ಸಾವಿರ, ಮೊಗವೀರರು12 ಸಾವಿರ ಮತ್ತು ಕ್ರೈಸ್ತರ 12 ಸಾವಿರ ಮತಗಳಿವೆ. ಈ ಸಮೀಕರಣ ನೋಡುವುದಾದರೆ ಈ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐಗೆ ಗೆಲ್ಲುವ ಸಾಧ್ಯತೆ ನಗಣ್ಯ. ಆದರೆ ಯುಟಿ ಕಾದರ್‌ ಅವರ ಒಂದಷ್ಟು ಮತವನ್ನು ವಿಭಜಿಸುವ ತಾಕತ್ತು ಅಲ್ಲಗಳೆಯುವಂತಿಲ್ಲ. ಇನ್ನು ಯುಟಿ ಕಾದರ್‌ ಮುಸ್ಲಿಮೇತರೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಗಣನೀಯ ಹಿಂದುಗಳ ಮತಗಳನ್ನು ಅವರು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಕ್ರೈಸ್ತರು ಮತ್ತು ದಲಿತರ ಬಹುತೇಕ ಮತಗಳು ಕಾಂಗ್ರೇಸ್‌ʼಗೆ ಗೆ ಕಟ್ಟಿಟ್ಟ ಬುತ್ತಿ.
ಬಿಜೆಪಿಯಿಂದ ಘಟಾನುಘಟಿ ನಾಯಕರೂ ಸ್ಪರ್ಧಿಸಿದರೂ ಹಿಂದುಗಳ ಸಂಪೂರ್ಣ ಮತ ಸೆಳೆದರೂ ಗೆಲ್ಲುವ ಅವಕಾಶ ಕಡಿಮೆ. ಆದರೆ ಉಳ್ಳಾಲ ಕ್ಷೇತ್ರದಲ್ಲಿ ಕಾಂಗ್ರೇಸ್‌ ಬುನಾದಿ ಭದ್ರವಾಗಿರುವುದರಿಂದ ಹಿಂದುಗಳ ಮತ ಕಾಂಗ್ರೇಸ್‌ ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನೂ ಯುಟಿ ಕಾದರ್ ಈ ಕ್ಷೇತ್ರದಲ್ಲಿ ಸೋಲಬೇಕಾದರೆ ಚಮತ್ಕಾರವೊಂದು ನಡೆದು ಎಸ್.ಡಿ.ಪಿ.ಐ 30 ರಿಂದ 40 ಸಾವಿರ ಮುಸ್ಲಿಮರ ಮತ ಪಡೆದು ಬಿಜೆಪಿ ಹಿಂದುಗಳ 80-90% ಮತಗಳನ್ನು ಪಡೆದರೆ ಗೆಲ್ಲುವ ಸಾಧ್ಯತೆಯಿದೆ. ಆದರೆ ಆ ಸಂಭವ ಉಳ್ಳಾಲ ಕ್ಷೇತ್ರದಲ್ಲಿ ತೀರ ಕಡಿಮೆ. ಒಂದು ಲೆಕ್ಕಚಾರದ ಪ್ರಕಾರ ಉಳ್ಳಾಲದಲ್ಲಿ ಎಸ್.ಡಿ.ಪಿ.ಐ ಮುಸ್ಲಿಮರ ಮನವೊಲಿಸಲು ಸಫಲರಾದರೆ 5-10 ಸಾವಿರ ಮತಗಳನ್ನು ಸೆಳೆಯಬಹುದೆಂಬ ಲೆಕ್ಕಚಾರವಿದೆ. ಆದರೆ ಈ ಮತಗಳು ಕಾಂಗ್ರೇಸ್‌ ಗೆಲುವಿನ ಅಂತರವನ್ನು ಕಡಿಮೆ ಮಾಡಬಹುದೇ ವಿನಾಹ ಸದ್ಯಕ್ಕೆ ಸೋಲಿಸುವುದು ಕಷ್ಟ. ಇನ್ನು ಬಿಜೆಪಿಗೆ ಮುಸ್ಲಿಮರ ಮತ ನಗಣ್ಯ. ಆದ್ದರಿಂದ ಬಿಜೆಪಿ ಮುಸ್ಲಿಮರ ಮತ ಇಲ್ಲದೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟ. ಆದರೆ 1994 ರಲ್ಲಿ ಈ ಕ್ಷೇತ್ರದಲ್ಲಿ ಕಮ್ಯುನಿಷ್ಠ್‌ ಪಕ್ಷ ಪ್ರಬಲವಾಗಿದ್ದ ಸಂದರ್ಭದಲ್ಲಿ ಬಿಜೆಪಿಯ ಕೆ ಜಯರಾಮ್‌ ಶೆಟ್ಟಿ ಜಯ ಗಳಿಸಿದ್ದರು. ಈ ಸ್ಪರ್ಧೆಯಲ್ಲಿ ಜೆಡಿಎಸ್‌ ಕೂಡ ಗಣನೀಯ ಮತ ಸೆಳೆದಿತ್ತು. ಆದರೆ ಅಂದಿನ ಪರಿಸ್ಥಿತಿ ಇಂದಿಲ್ಲ. ಇದೀಗ ಜೆಡಿಎಸ್‌ 5-10 ಸಾವಿರ ಮತ ಸೆಳೆಯುವುದು ಕಷ್ಟ ಎನ್ನಬಹುದು.


ಇನ್ನು ಕಾಂಗ್ರೇಸ್‌ ಯುಟಿ ಕಾದರ್‌ ಎದುರಾಳಿಯಾಗಿ ಬಿಜೆಪಿ ಯಾರನ್ನೂ ಅಭ್ಯರ್ಥಿಯಾಗಿ ಇಳಿಸಲಿದೆ ಎಂಬುವುದು ಇನ್ನು ಫೈನಲ್‌ ಆಗಿಲ್ಲ. ಸಂಘ ಪರಿವಾರದ ವಿವಾದಿತ ನಾಯಕ ಶರಣ್‌ ಪಂಪ್‌ ವೆಲ್‌, ಸಂತೋಷ್‌ ಬೊಳಿಯಾರ್‌, ಚಂದ್ರಹಾಸ್‌,ಸತೀಶ್‌ ಅವರ ಹೆಸರು ಆಕಾಂಕ್ಷಿಗಳಾಗಿದ್ದಾರೆ. ಆದರೆ ಆಕಾಂಕ್ಷಿಗಳಿಗೆ 80-90% ಹಿಂದುಗಳ ಮತ ಸೆಳೆಯುವ ಸಾಮರ್ಥ್ಯ ಇಲ್ಲ ಎಂಬುವುದು ಒಂದು ಕಡೆಯಾದರೆ ರಾಜ್ಯ ಸರಕಾರದ ಮೇಲಿರುವ ಭ್ರಷ್ಠಾಚಾರದ ಆರೋಪಗಳು ಮತ್ತೊಂದು ತಲೆ ನೋವು. ಆದರೆ ಇವೆಲ್ಲದರ ನಡುವೆ ಎಸ್.ಡಿ.ಪಿ.ಐ “ತಾಂಟರ್‌ ರೆ ಬಾ ತಾಂಟ್” ವಿವಾದಿತ ನಾಯಕ ರಿಯಾಝ್‌ ಫರಂಗಿಪೇಟಿ ಯುಟಿಕೆ ವಿರುದ್ಧ ತೊಡೆ ತಟ್ಟಿದ್ದಾರೆ. ಸದ್ಯಕ್ಕೆ ಇವರಿಗೆ ಮುಸ್ಲಿಮರ ಅಲ್ಪ ಮತಗಳು ಸಿಕ್ಕಿದರೂ ಗೆಲ್ಲುವ ಸಾಧ್ಯತೆ ನಗಣ್ಯ. ಅದಕ್ಕೆ ಮತ್ತೊಂದು ಅತೀ ಮುಖ್ಯ ಕಾರಣ ಎಸ್.ಡಿ.ಪಿ.ಐಗೆ ಹಿಂದುಗಳ ಮತ ಸೆಳೆಯುವ ಸಾಮರ್ಥ್ಯ ಸದ್ಯಕ್ಕಿಲ್ಲ. ಈ ಕ್ಷೇತ್ರದಲ್ಲಿ ಮುಸ್ಲಿಮರ ಮತದೊಂದಿಗೆ ಹಿಂದುಗಳ ಮತ್ತು ಕ್ರೈಸ್ತರ ಮತ ಸೆಳೆಯುವ ಸಂಪೂರ್ಣ ಸಾಮರ್ಥ್ಯ ಯುಟಿ ಕಾದರ್‌ʼಗೆ ಇರುವುದರಿಂದ ಅವರ ಗೆಲುವು ಈಗಿನ ಲೆಕ್ಕಚಾರದ ಪ್ರಕಾರ ಪಕ್ಕಾ!

One Comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button