Vijayapura

ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ: ಆಸೀಫುಲ್ಲಾ ಖಾದ್ರಿ

ವಿಜಯಪುರ: ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಮುಸ್ಲಿಂ ಸಮುದಾಯದ ಮೇಲೆ ಅನ್ಯಾಯ ಆಗುತ್ತಿದೆ ಮುಂದೆ ಈ ರೀತಿಯಾಗಿ ಅನ್ಯಾಯ ಆಗಬಾರದೆಂದು ನ್ಯಾಯವಾದಿ ಆಸೀಫುಲ್ಲಾ ಖಾದ್ರಿ ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದಲ್ಲಿ ನಮ್ಮ ಸಮಾಜ ಎರಡನೇ ಅತಿದೊಡ್ಡ ಸಮಾಜ ಆಗಿದೆ. ನಮಗೆ ಬರಬೇಕಾಗಿರುವ ಹಕ್ಕನ್ನು ಕಾಂಗ್ರೆಸ್ ಪಕ್ಷ ನಮಗೆ ನೀಡಬೇಕು. ಒಂದು ವೇಳೆ ತಾರತಮ್ಯ ಮಾಡಿದರೆ ಬೇರೆ ಬಹಳಷ್ಟು ರಾಜಕೀಯ ಪಕ್ಷಗಳು ನಮ್ಮ ಸಮುದಾಯದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿವೆ ಅಂತಹ ಪಕ್ಷಗಳಿಗೆ ನಾವು ಬೆಂಬಲ ನೀಡಬೇಕಾಗುತ್ತದೆ ಎಂದು ಹೇಳಿದರು.


ಬಿಜಾಪುರ ನಗರದಲ್ಲಿ ಅಧಿಕೃತ ಅಲ್ಪಸಂಖ್ಯಾತ ಅಭ್ಯರ್ಥಿಯ ಘೋಷಣೆಯಾದಾಗ ಜಿಲ್ಲೆಯ ಎಲ್ಲ ಕ್ಷೇತ್ರದ ಕಾಂಗ್ರೆಸ್ ನಾಯಕರು ಮೈ ತೊಳೆದುಕೊಂಡು ಸಿದ್ಧರಾಮೇಶ್ವರ ಗುಡಿಗೆ ಹೋಗಿ ವಿಜಯಪುರ ನಗರದಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನು ಆರಿಸಿ ತರುತ್ತೇವೆ ಎಂದು ಪ್ರಮಾಣ ಮಾಡಬೇಕು. ಒಂದು ವೇಳೆ ಅಡ್ಜಸ್ಟಮೆಂಟ್ ಪಾಲಿಟಿಕ್ಸ್ ಯಾರೆ ಮಾಡಿದರು, ಬಿಜೆಪಿ, ಯತ್ನಾಳ ಜೊತೆ ಇಂಟರ್ನಲ್ ಅಡ್ಜಸ್ಟ್ಮೆಂಟ್ ಮಾಡಿದರೆ ನಾವು ನಾಮಪತ್ರ ಸಲ್ಲಿಸುವ ಕೊನೆಯದಿನ ಮುಗಿದ ತಕ್ಷಣ ಆ ಎಲ್ಲ ನಾಯಕರ ಮತಕ್ಷೇತ್ರದಲ್ಲಿ ಪಾದಯಾತ್ರೆ ಮೂಲಕ ನಮ್ಮ ಜನರಿಗೆ ತಿಳುವಳಿಕೆ ನೀಡಿ ಅವರಿಗೆ ಸೋಲುಣಿಸುವವರೆಗೆ ನಾವು ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.


ಪ್ರತಿಯೊಂದರಲ್ಲಿಯೂ ಕಮಿಷನ್ ಪಡೆದಂತಹ ಸರ್ಕಾರ ಈ ಬಿಜೆಪಿ ಸರ್ಕಾರ. 40% ಸರ್ಕಾರ ಇದಾಗಿದೆ. ಜಾಮೀನು ಪಡೆದು ಹೊರ ಬಂದಿದ್ದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಜಾಮೀನು ವಜಾಗೊಂಡು ಮತ್ತೆ ಜೈಲಿಗೆ ಹೋಗಿದ್ದಾರೆ. ಅವರು ಯಾಕೆ ಜೈಲಿಗೆ ಹೋದರು ಭ್ರಷ್ಟಾಚಾರ ಮಾಡಿದ್ದಕ್ಕಾಗಿ ತಾನೆ. ಇದು ಭ್ರಷ್ಟಾಚಾರ ಸರ್ಕಾರ ಇದೆ. ಇಂತಹ ಭ್ರಷ್ಟಾಚಾರಿ ಸರ್ಕಾರತೆಗೆದುಹಾಕಬೇಕೆಂದರೆ ಕಾಂಗ್ರೆಸ್ ಪಕ್ಷ ನಿಷ್ಪಕ್ಷಪಾತವಾಗಿ ಅಲ್ಪಸಂಖ್ಯಾತರೊಂದಿಗೆ ಕೈ ಜೋಡಿಸಬೇಕು. ಹೊಂದಾಣಿಕೆ ರಾಜಕಾರಣ ನಿಲ್ಲಸಬೇಕು. ಯಾವುದೇ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದರೆ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಅಲ್ಪಸಂಖ್ಯಾತರು ಸಿದ್ಧರಿದ್ದಾರೆ ಎಂದು ಎಚ್ಚರಿಕೆ ನೀಡಿದರು.


ಬ್ರಿಟಿಷರನ್ನು ಈ ನೆಲದಿಂದ ಯಾವ ರೀತಿಯಾಗಿ ಓಡಿಸಿದ್ದೇವೆ, ನಿರಂತರವಾಗಿ ಬಿಜೆಪಿಯೊಂದಿಗೆ ಯಾವ ರೀತಿಯಾಗಿ ಹೋರಾಟ ಮಾಡುತ್ತಿದ್ದೇವೆ ಅದೇರೀತಿ ಕಾಂಗ್ರೆಸ್ ಪಕ್ಷದ ವಿರುದ್ಧವು ನಾವು ಹೋರಾಟ ಮಾಡಲು ಸಿದ್ದರಿದ್ದೇವೆ ಎಂದರು.

ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ ಗೈರು ಏಕೆ?:
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮನ್ನ ತಾವೆ ಹಿಂದು ಫಾಯರ್ ಬ್ರ್ಯಾಂಡ್, ಹಿಂದು ಹುಲಿ, ಹಿಂದು ನಾಯಕ, ಹಿಂದುತ್ವ ಅಜೆಂಡಾ ಮೆಲೆ ಶಾಸನ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾ ತಮ್ಮ ಬೆನ್ನು ತಾವೆ ಚಪ್ಪರಿಸಿಕೊಳ್ಳುತ್ತಿದ್ದಾರೆ. ಅವರು ನಿಜವಾದ ಹಿಂದುತ್ವವಾದಿಯಾಗಿದ್ದರೆ ವಿಜಯಪುರ ನಗರದಲ್ಲಿ ಅದ್ದೂರಿಯಾಗಿ ನಡೆದ ರಾಮ ನವಮಿ ಆಚರಣೆಯಲ್ಲಿ ಗೈರಾಗಿದೇಕೆ? ಅಷ್ಟೊಂದು ದೊಡ್ಡ ಕಾರ್ಯಕ್ರಮ ನಡೆದರು ಆ ಕಾರ್ಯಕ್ರಮಕ್ಕೆ ಯತ್ನಾಳರಿಗೆ ಅಹ್ವನಾ ಇರಲಿಲ್ಲವೇ? ಎಂದು ಸವಾಲು ಹಾಕಿದರು.
ಬೀದರ್ದಿಂದ ಚಾಮರಾಜ ನಗರ ವರೆಗೆ 50 ಸಾವಿರ ಮತ ಬೀಳುತ್ತವೆ ಎನ್ನುವ ಶಾಸಕ ಯತ್ನಾಳರು ರಾಮ ನವಮಿಯಲ್ಲಿ ಅವರು ಗೈರಾಗಿರುವುದು ಎನನ್ನು ಹೇಳುತ್ತದೆ. ಇವರದು ಢೋಂಗಿ ಹಿಂದುತ್ವ ಇದೆಯೋ ನಿಜವಾದ ಹಿಂದುತ್ವ ಇದೆ?.


ಜಲನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತದೆ ನಂತರ ಬೃಹತ್ ಮೆರವಣಿಗೆ ನಡೆದಾಗ ಶಾಸಕ ಯತ್ನಾಳರು ಗೈರಾಗಿದ್ದು ಯಾಕೆ? ಇವರಿಗೆ ಅಹ್ವಾನ ಇಲ್ಲದಿದ್ದರೆ ಇವರು ರಾಮ ಭಕ್ತರಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು. ಬಸನಗೌಡ ಪಾಟೀಲ ಯತ್ನಾಳ ಅವರ ಗೈರು ಅವರ ಹಿಂದುತ್ವಕ್ಕೆ ಒಂದು ಸವಾಲ ಆಗಿದೆ ಎಂದರು.
ಇನ್ನು ಬಿಜಾಪುರ ನಗರದ ಸರ್ವೆ ಮಾಡಿದರೆ ಕೇವಲ ನಾಲ್ಕು ರಸ್ತೆಗಳು ಮಾತ್ರ ಅಭಿವೃದ್ಧಿಯಾಗಿವೆ. ಅದು ಕಳೆದ ಸರ್ಕಾರದಲ್ಲಿ ಬಂದ ಅನುದಾನದಿಂದ ಆಗುರುವುದು. ಬಿಜಾಪುರ ನಗರದ ಯಾವುದೇ ಬಡಾವಣೆಯಲ್ಲಿ ಸಮೃದ್ಧ ವ್ಯವಸ್ಥೆ ಕಲ್ಪಿಸಿಲ್ಲ. ಕೇವಲ ಜಾತಿಗಳ ಬಗ್ಗೆ ಮಾತನಾಡಿ ಜಾತಿ ವಿಷ ಬೀಜ ಬಿತ್ತ ರಾಜಕಾರಣ ಮಾಡುತ್ತಿದ್ದಾರೆ.

ಬ್ರಿಟಿಷರಿಂದ ಪಿಂಚಣಿ ಪಡೆದ ಸಾವರ್ಕರ್ ಮಕ್ಕಳಲ್ಲ:


ಶಾಸಕ ಯತ್ನಾಳ ಅವರಯ ಪಾಕಿಸ್ತಾನದ ಕುರಿತು ಮಾತನಾಡುತ್ತಾರೆ. ನೀವು ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಶಾಸಕರಾಗಿ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಪಾಕಿಸ್ತಾನದ ಸಂವಿಧಾನದಿಂದ ಅಲ್ಲ. ಮುಸ್ಲಿಂರು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬೆಂಬಲಿಸುವುದಿಲ್ಲಾ. ಪಾಕಿಸ್ತಾನಕ್ಕೆ ಬೆಂಬಲಿಸುವಂತಹ ಮುಸ್ಲಿಂರು ಈ ದೇಶದಲ್ಲಿ ಹುಟ್ಟೆ ಇಲ್ಲಾ. ನಾವು ಟಿಪ್ಪು ಸುಲ್ತಾನ ಮಕ್ಕಳು. ಬಿಟ್ರಿಷರೊಂದಿಗೆ ಹೊಂದಾಣೀಕೆ ಮಾಡಿಕೊಂಡು, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು, ಬ್ರಿಟಿಷರಿಂದ ಪಿಂಚಣಿ ತೆಗೆದುಕೊಂಡ ಸಾವರ್ಕರ್ ಮಕ್ಕಳಲ್ಲಾ. ನಾವು ಟಿಪ್ಪು ಸುಲ್ತಾನ ಮಕ್ಕಳು ಇದನ್ನು ನಾವು ಎದೆ ತಟ್ಟಿ ಹೇಳುತ್ತೇವೆ ಎಂದರು.
ಸಾವರ್ಕರ್ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲಾ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಅವರಿಂದ ಪಿಂಚಣಿ ಪಡೆದ ಸಾವರ್ಕರ್ ಬಸನಗೌಡ ಪಾಟೀಲ ಯತ್ನಾಳರ ವಂಶಜರು. ಈ ನೆಲದ ಮೇಲೆ ನಮ್ಮ ಪೂರ್ವಜರ ರಕ್ತ ಬಿದ್ದಿದೆ. ಸಾವರ್ಕರ್ ಅವರ ರಕ್ತ ಈ ನೆಲದ ಮೇಲೆ ಬಿದ್ದಿಲ್ಲ. ಆರ್ಎಸ್ಎಸ್ ಎಂದು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button