Udupi

ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಉಡುಪಿ ಜಾಮೀಯಾ ಮಸೀದಿ ಭೇಟಿ

ಉಡುಪಿ: ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ಉಡುಪಿಯ ಜಾಮೀಯಾ ಮಸೀದಿಗೆ ಇಂದು ಭೇಟಿ ನೀಡಿದರು‌.

ನೆರೆದಿದ್ದ ಜನರಲ್ಲಿ ಮೇ 10 ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮೆಲ್ಲರ ಹಕ್ಕು. ನೀವು ಇಚ್ಚಿಸಿದ ಪಕ್ಷಕ್ಕೆ ಮತ ನೀಡಿ ಆದರೆ ಯಾವುದೇ ಕಾರಣಕ್ಕೂ ಮತದಾನ ಮಾಡದೆ ಇರಬೇಡಿ ಎಂದು ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.

IMG 20230414 134914 Udupi

ಈ ಬಾರಿ ಪಾರದರ್ಶಕವಾದ ಸರಕಾರ ತರಬೇಕು. ಉಡುಪಿಯಲ್ಲೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬಲ್ಲ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮ ಎಂದು ಕರೆ ನೀಡಿದರು.

ಅಮೃತ್ ಶೆಣೈ, ಮೌಲನಾ ಅಬ್ದುರ್ಶೀದ್ ನದ್ವಿ ಉಮರಿ, ಇಬ್ರಾಹೀಮ್, ಹಮ್ಮದ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button