Featured StoryNationalPolitics

ನೂತನ ಸಂಸತ್ತು ರಾಷ್ಟ್ರಪತಿ ಉದ್ಘಾಟಿಸುವಂತೆ ಪಟ್ಟು: ಮೋದಿ ಉದ್ಘಾಟಿಸಿದರೆ ವಿರೋಧ ಪಕ್ಷಗಳು ಗೈರಾಗುವ ಸಾಧ್ಯತೆ

ಹೊಸದಿಲ್ಲಿ: ನೂತನ ಸಂಸತ್ ಭವನ ಉದ್ಘಾಟನೆ ಮಾಡಬೇಕಿರುವುದು ರಾಷ್ಟ್ರಪತಿಯೇ ಹೊರತು ಪ್ರಧಾನಿಯಲ್ಲ ಎಂಬ ಪ್ರತಿಪಕ್ಷಗಳ ಬೇಡಿಕೆಗಳ ನಡುವೆಯೇ ಮೇ 28ರಂದು ನಡೆಯಲಿರುವ ಸಮಾರಂಭವನ್ನು ಬಹಿಷ್ಕರಿಸಲು ಹಲವು ರಾಜಕೀಯ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ.

ಪಕ್ಷಗಳಿಂದ ಅಧಿಕೃತ ಆಹ್ವಾನ ಬಂದ ನಂತರ ಬುಧವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

“ಸಂಸತ್ತು ಕೇವಲ ಹೊಸ ಕಟ್ಟಡವಲ್ಲ; ಇದು ಹಳೆಯ ಸಂಪ್ರದಾಯಗಳು, ಮೌಲ್ಯಗಳು, ಪೂರ್ವನಿದರ್ಶನಗಳು ಮತ್ತು ನಿಯಮಗಳೊಂದಿಗೆ ಸ್ಥಾಪನೆಯಾಗಿದೆ – ಇದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಟಿಎಂಸಿ ನಾಯಕ ಡೆರೆಕ್ ಒ’ಬ್ರೇನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಕೂಡ ತಮ್ಮ ಪಕ್ಷವು ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದೀಗ ಆಪ್ ಕೂಡ ಧ್ವನಿ ಕೂಡಿಸಿದ್ದು ಸಂಸತ್ತನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೆಂಬ ಕೂಗು ಹೆಚ್ಚಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button