Featured StoryNational

ಬಿಜೆಪಿ ಸಂಸದನ ಲೈಂಗಿಕ ಕಿರುಕುಳ ಪ್ರಕರಣ: ದೇಶದ ಪ್ರತಿಷ್ಠಿತ ಕುಸ್ತಿಪಟುಗಳಿಂದ ಗಂಗಾ ನದಿಯಲ್ಲಿ ಪದಕ ವಿಸರ್ಜಿಸಲು ನಿರ್ಧಾರ

ಹೊಸದಿಲ್ಲಿ: ಇತ್ತೀಚಿನ ವರದಿ ಪ್ರಕರಾ, ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಎಲ್ಲಾ ಪ್ರತಿಭಟನಾ ನಿರತ ಕುಸ್ತಿಪಟುಗಳು ಪವಿತ್ರ ಗಂಗಾ ನದಿಯಲ್ಲಿ ತಮ್ಮ ಎಲ್ಲಾ ಪದಕಗಳನ್ನು ವಿಸರ್ಜಿಸಲು ಮಂಗಳವಾರ ಸಂಜೆ ಹರಿದ್ವಾರಕ್ಕೆ ತೆರಳಲಿದ್ದಾರೆ.

ಬಳಿಕ ಮತ್ತೆ ದೆಹಲಿಗೆ ಬಂದು ಇಂಡಿಯಾ ಗೇಟ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರತಿಭಟನಾನಿರತ ಕುಸ್ತಿಪಟುಗಳು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಮಲಿಕ್ ಮತ್ತು ಇತರ ಕುಸ್ತಿಪಟುಗಳು ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.ಅದರಲ್ಲಿ ಅವರು ದೆಹಲಿ ಪೊಲೀಸರ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button