
ಐಪಿಎಲ್’ನಲ್ಲಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟದ್ದು ಬಿಜೆಪಿಯ ಸ್ವಯಂಸೇವಕ ಎಂಬುದು ನಮಗೆ ಹೆಮ್ಮೆ ಇದೆ – ಅಣ್ಣಾಮಲೈ
ಚೆನ್ನೈ: ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಗೆದ್ದು ಐಪಿಎಲ್ ಚಾಂಪಿಯನ್ (IPL Champion) ಪಟ್ಟ ಅಲಂಕರಿಸಿದ ಬೆನ್ನಲ್ಲೇ ಈಗ ತಮಿಳುನಾಡು (Tamil Nadu) ಬಿಜೆಪಿ ಮುಖ್ಯಸ್ಥ ಅಣ್ಣಾ ಮಲೈ ಮಾತು ವೈರಲಾಗಿದೆ.
ಸಿಎಸ್‌ಕೆ ಜಯಗಳಿಸಿದ ಬೆನ್ನಲ್ಲೇ ಡಿಎಂಕೆ “ಗುಜರಾತ್ ಮಾದರಿಯ ಮೇಲೆ ದ್ರಾವಿಡ ಮಾದರಿಯ ವಿಜಯ” ಎಂದು ಡಿಎಂಕೆ (DMK) ಹೇಳಿತ್ತು.
ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (K Annamalai), ಜಡೇಜಾ ಬಿಜೆಪಿ ಕಾರ್ಯಕರ್ತ ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿ ನನಗೂ ಹೆಮ್ಮೆ ಇದೆ. ಸಿಎಸ್‌ಕೆಗಿಂತ ಜಿಟಿಯಲ್ಲಿ ಹೆಚ್ಚು ತಮಿಳು ಆಟಗಾರರಿದ್ದರು ಎಂದು ಹೇಳಿದ್ದಾರೆ.
ರವೀಂದ್ರ ಜಡೇಜಾ (Ravindra Jadeja) ಎಲ್ಲಿಯೂ ಬಿಜೆಪಿಗೆ ಬಹಿರಂಗವಾಗಿಯೇ ಬೆಂಬಲ ಸೂಚಿಸಿಲ್ಲ. ಆದರೆ ಅವರ ಪತ್ನಿ 2019ರಲ್ಲಿ ಬಿಜೆಪಿ ಸೇರ್ಪಡೆಯಾಗಿ 2022ರ ಚುನಾವಣೆಯಲ್ಲಿ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿ 80 ಸಾವಿರ ಮತಗಳಿಂದ ಜಯಗಳಿಸಿದ್ದರು.
ನಾನು ತಮಿಳಿಗನಾಗಿರುವುದಕ್ಕೆ ಚೆನ್ನೈ ಗೆಲುವಿಗೆ ಹೆಮ್ಮೆಪಡುತ್ತೇನೆ. ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟ ಬಿಜೆಪಿಯ ಸ್ವಯಂಸೇವಕ ಎಂಬುದು ನಮಗೆ ಹೆಮ್ಮೆ ಇದೆ ಎಂದಿದ್ದಾರೆ.




