Crime

ಪ್ರಶಸ್ತಿಯಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಳ

ಬೀದರ್,ಜ.19:- ಪ್ರಶಸ್ತಿಗಳು, ಸನ್ಮಾನಗಳು ಹಾಗೂ ಗೌರವಗಳು ವ್ಯಕ್ತಿಯ ಸಾಮಾಜಿಕ ಸೇವೆಯ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಲಿಂಗಾಯತ ಮಹಾಮಠದ ಡಾ. ಅಕ್ಕ ಗಂಗಾಂಬಿಕಾ ನುಡಿದರು.
ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಸಾಹಿತ್ಯ ಸಂಘದ ಸಂಯುಕ್ತಾಶ್ರಯದಲ್ಲಿ ಚಂದ್ರಶೇಖರ ಹೆಬ್ಬಾಳೆಯವರ ತೋಟದ ಮನೆಯ ಆವರಣದಲ್ಲಿ ಎಳ್ಳಾಮಾವಾಸ್ಯೆ ನಿಮಿತ್ಯ ನಡೆದ ಜಾನಪದ ಸಂಭ್ರಮ ಹಾಗೂ ಶಿವರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.
ಸಾಧಕರು ಕೇವಲ ಸೇವೆ ಮಾಡುತ್ತ ಹೋಗುತ್ತಾರೆ. ಅಂತವರನ್ನು ಗುರುತಿಸುವ ಕಾರ್ಯ ಸಮಾಜದ ಸಂಘ-ಸಂಸ್ಥೆಗಳಿಂದ ನಿರಂತರ ನಡೆಯಬೇಕು. ಹೀಗಾದಾಗ ಮಾತ್ರ ಸಾಧಕರಿಗೆ ಇನ್ನಷ್ಟು ಸೇವೆ ಮಾಡುವ ನಾಡು ನುಡಿಗಾಗಿ ಸೇವೆ ಸಲ್ಲಿಸುವ ಹುರುಪು ಬರುತ್ತದೆ ಎಂದು ಅವರು ಹೇಳಿದರು.
ಜಾನಪದ ತಜ್ಞೆ ಲಿಂ.ರತ್ನಮ್ಮ ಹೆಬ್ಬಾಳೆಯವರ ನೆನಪಿನಲ್ಲಿ ಜಿಲ್ಲೆಯ ಏಳು ಜನ ಸಾಧಕರಿಗೆ ಗುರುತಿಸಿ ಶಿವರತ್ನ ಪ್ರಶಸ್ತಿಚಿiÀುನ್ನು ಚಂದ್ರಶೇಖರ ಹೆಬ್ಬಾಳೆ, ಡಾ. ಜಗನ್ನಾಥ ಹೆಬ್ಬಾಳೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಪತ್ರ, ಗೌರವ ಸನ್ಮಾನ ಒಳಗೊಂಡಿದೆ. ಹೆಬ್ಬಾಳೆಯವರು ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿವಿಗಾಗಿ ಅವಿರತ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ.ಎಸ್.ಎನ್.ಶಿವಣಕರ (ಶಿಕ್ಷಣ ಕ್ಷೇತ್ರ), ನಿರಂಜಪ್ಪ ಪಾತ್ರೆ (ಶಿಕ್ಷಣ ಕ್ಷೇತ್ರ), ಡಾ.ನಾಗನಾಥ ಎಂ.ಹುಲಸೂರೆ (ವೈದ್ಯಕೀಯ ಕ್ಷೇತ್ರ), ಶಿವಶರಣಪ್ಪ ಬಿ.ಮಲ್ಲಾಡೆ (ಶಿಕ್ಷಣ ಕ್ಷೇತ್ರ), ಪ್ರೊ. ವೀರಶೆಟ್ಟಿ ಮೈಲೂರಕರ್ (ಶಿಕ್ಷಣ ಕ್ಷೇತ್ರ), ಚನ್ನಬಸಪ್ಪ ಪತಂಗೆ ಗೋರ್ಟಾ (ಧಾರ್ಮಿಕ ಕ್ಷೇತ್ರ), ಬಸವರಾಜ ಶಟಕಾರ (ಶಿಕ್ಷಣ ಕ್ಷೇತ್ರ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಯೋಗೇಂದ್ರ ಯದಲಾಪುರೆ, ಸುಭಾಷ ಹೆಬ್ಬಾಳೆ, ರಾಜಶೇಖರ ಮಂಗಲಗಿ, ಬಸವರಾಜ ಹೆಬ್ಬಾಳೆ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಸುಧಾಕರ ಹೆಬ್ಬಾಳೆ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ರವಿಕಮಾರ ಹೆಬ್ಬಾಳೆ, ಜೈರಾಜ ಖಂಡ್ರೆ, ಮಹಾರುದ್ರ ಡಾಕುಳಗೆ, ಡಾ.ಸುನಿತಾ ಕೂಡ್ಲಿಕರ್, ಡಾ.ಮಹಾನಂದ ಮಡಕಿ, ನಿವೇದಿತಾ ಹೆಬ್ಬಾಳೆ, ಶಿವಕುಮಾರ ಸ್ವಾಮಿ, ಎಸ್.ಬಿ.ಕುಚಬಾಳ ಮತ್ತಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button