
ಉಡುಪಿ: ವಾಹನ ಸಂಚಾರ ಬದಲಾವಣೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಶಿರಿಬೀಡು ವಾರ್ಡಿನ ಸಿಟಿ ಬಸ್ಸ್ಟ್ಯಾಂಡ್ ನಿಂದ ಕಾಫಿಯಾ ಹೋಟೆಲ್ ವರೆಗೆ ಒಳಚರಂಡಿ ಜಾಲದ ಪೈಪ್ ಬದಲಾವಣೆ ಮಾಡಿ ಕಾಂಕ್ರೀಟ್ ಛೇಂಬರ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ, ಸದರಿ ರಸ್ತೆಯಲ್ಲಿ ಜೂನ್ 15ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬದಲಿ ವ್ಯವಸ್ಥೆಯಾಗಿ, ಸರ್ವಿಸ್ ಬಸ್ಸ್ಟ್ಯಾಂಡ್ ಎದುರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ್ಟ್ಯಾಂಡ್ ಮಾರ್ಗವಾಗಿ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಗರಸಭೆಯ ಪೌರಾಯಕ್ತರ ಪ್ರಕಟಣೆ ತಿಳಿಸಿದೆ.
ಒಡಿಶಾ ರೈಲು ದುರಂತ : ಸಹಾಯವಾಣಿ
ಉಡುಪಿ:ಒಡಿಶಾ ರಾಜ್ಯದಲ್ಲಿ ರೈಲು ಅಪಘಾತ ಸಂಭವಿಸಿದ್ದು, ಸದ್ರಿ ಅಪಘಾತದಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದ ಯಾವುದರೂ ಸಾರ್ವಜನಿಕರು ಸಿಲುಕಿಕೊಂಡಿದ್ದರೆ, ಆ ಬಗ್ಗೆ ಸದ್ರಿಯವರ ಮಾಹಿತಿಯನ್ನು ಸಂಬಂಧಿಸಿದವರು , ಕರ್ನಾಟಕ ರಾಜ್ಯ ಸಹಾಯವಾಣಿ ಕೇಂದ್ರ 080-22253707 / 080-22340676(Toll Free No:1070), ಉಡುಪಿ ಜಿಲ್ಲಾಧಿಕಾರಿ ಕಛೇರಿ (24*7) ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ0820–2574802, (Toll Free No:1070) ಸಂಖ್ಯೆಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಕಾಪು : ಪ್ರಾಕೃತಿಕ ವಿಕೋಪ ಕುರಿತು ಕಂಟ್ರೋಲ್ ರೂಂ ಸ್ಥಾಪನೆ
ಉಡುಪಿ: ಕಾಪು ತಹಶೀಲ್ದಾರರ ಕಚೇರಿಯಲ್ಲಿ ಮಳೆಗಾಲದ ಸಮಯದಲ್ಲಿ ಹಾನಿ ಮತ್ತು ಪ್ರಾಕೃತಿಕ ವಿಕೋಪಗಳ ನಿರ್ವಹಣೆಗಾಗಿ ದಿನದ 24 ಗಂಟೆಯೂ ಕಂಟ್ರೋಲ್ ರೂಂ ತೆರೆಯಲಾಗಿದ್ದು,ಸಾರ್ವಜನಿಕರು ದೂ.ಸಂ. 0820-2551444 ನ್ನು ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಪು ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




