
Udupi
ಕಾರ್ಕಳ | ವ್ಯವಹಾರದಲ್ಲಿ ನಷ್ಟ: ಫ್ಯಾಕ್ಟರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ
ಕಾರ್ಕಳ: ವ್ಯವಹಾರದಲ್ಲಿನ ನಷ್ಟದಿಂದ ಮಾನಸಿಕವಾಗಿ ನೊಂದ ಉದ್ಯಮಿಯೊಬ್ಬರು ಫ್ಯಾಕ್ಟರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.6ರಂದು ಸಂಜೆ ಅಜೆಕಾರು ಸಮೀಪದ ಹೆರ್ಮುಂಡೆ ಎಂಬಲ್ಲಿ ನಡೆದಿದೆ.
ಅಜೆಕಾರು ಮುಖ್ಯ ರಸ್ತೆಯ ನಿವಾಸಿ ನಕುಲದಾಸ್ ಪೈ(51) ಮೃತ ಉದ್ಯಮಿ. ಇವರು ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ನೊಂದು ಹೆರ್ಮುಂಡೆಯಲ್ಲಿರುವ ಫ್ಯಾಕ್ಟರಿಯ ಹಿಂಬದಿ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ




