Udupi

4.69 ಕೋಟಿ ರೂ.ಗೆ ಮಾರಾಟವಾಗಬೇಕಿದ್ದ 54 ಸೆಂಟ್ಸ್ ಜಾಗವನ್ನು ಕೇವಲ 88 ಲಕ್ಷ ರೂ. ಗೆ ಮಾರಾಟ: ವರ್ತಕರ ಪ್ರತಿಭಟನೆ

ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳ ಭ್ರಷ್ಟಾಚಾರ ವಿರುದ್ಧ ವರ್ತಕರ ಪ್ರತಿಭಟನೆ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಎಪಿಎಂಸಿ ವರ್ತಕರು ಇಂದು ಆದಿಉಡುಪಿಯ ಎಪಿಎಂಸಿ ಆವರದಲ್ಲಿ ಪ್ರತಿಭಟನೆ ನಡೆಸಿದರು.


ಎಪಿಎಂಸಿ ಅಧಿಕಾರಿಗಳು ಎಪಿಎಂಸಿ ಜಾಗವನ್ನು ಅತೀ ಕಡಿಮೆ ದರದಲ್ಲಿ ಲೀಸ್ ಕಂ ಸೇಲ್ ಮಾಡುವ ಮೂಲಕ ವರ್ತಕರಿಗೆ ಅನ್ಯಾಯ ಮಾಡಿದ್ದಾರೆ. 4.69 ಕೋಟಿ ರೂ.ಗೆ ಮಾರಾಟವಾಗಬೇಕಿದ್ದ 54 ಸೆಂಟ್ಸ್ ಜಾಗವನ್ನು ಕೇವಲ 88 ಲಕ್ಷ ರೂ. ಗೆ ಮಾರಾಟ ಮಾಡಿದ್ದಾರೆ‌. ಇದರಿಂದ ಸರಕಾರಕ್ಕೆೆ ಸಾಕಷ್ಟು ನಷ್ಟವಾಗಿದೆ. ಈ ಪ್ರಕ್ರಿಯೆ ಅನಧಿಕೃತ, ಕಾನೂನು ಬಾಹಿರವಾಗಿದ್ದು, ಉಡುಪಿಯಲ್ಲಿ ಮಾರಾಟ ದರಕ್ಕಿಂತ ತೀರ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದಾರೆ. ಸರಕಾರ ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ರೈತ ಮುಖಂಡ ರಾಘವೇಂದ್ರ ಉಪ್ಪೂರು ಆಗ್ರಹಿಸಿದರು.


ಕೃಷಿಕ ರಾಧಾಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆೆ, ರಾಧಾಕೃಷ್ಣ ಮಲ್ಪೆೆ, ಮಾಜಿ ಎಪಿಎಂಸಿ ಸದಸ್ಯೆೆ ವಿಶಾಲಾಕ್ಷಿ, ವರ್ತಕರಾದ ಫಯಾಝ್ ಜಗಳೂರು, ಚಂದ್ರ, ಲಕ್ಷ್ಮಣ, ನಗರಸಭೆ ಸದಸ್ಯ ವಿಜಯ ಕೊಡವೂರು ಇದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button