
ಬೀದರಿನಲ್ಲಿ ಸಂವಿಧಾನ ದಿನಾಚರಣೆ, ಬೃಹತ್ ಸಂಕಲ್ಪ ಸಮಾವೇಶ 26 ಕ್ಕೆ
ಬೀದರ್,ಜ.21:- 72 ನೇ ಸಂವಿಧಾನ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ನಿಮಿತ್ತ ಜ. 26 ರಂದು ಬೃಹತ್ ಸಂಕಲ್ಪ ಸಮಾವೇಶ ನಡೆಯಲಿದೆ ಎಂದು ಸಂವಿಧಾನ ದಿನಾಚರಣೆ ಹಾಗೂ ಸಂಕಲ್ಪ ಸಮಾವೇಶ ಸಮಿತಿ ಅಧ್ಯಕ್ಷ, ದಲಿತ ಮುಖಂಡ ಬಾಬುರಾವ್ ಪಾಸ್ವಾನ್ ಇಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಲ್ಪ ಸಮಾವೇಶ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಜ.26 ರಂದು ಸಂಜೆ 5 ಕ್ಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾರ್ಯಕ್ರಮ ನಡೆಯುವುದು. ಮಹಾರಾಷ್ಟ್ರದ ವಿಚಾರವಾದಿ ಸುಭಾಷನ್ ಶೇಕ್, ದೆಹಲಿಯ ಐಎಎಸ್ ಅಕಾಡೆಮಿಯ ಡಾ. ಶಿವಕುಮಾರ ಅಕ್ಕ, ಆದಿವಾಸಿಗಳ ಮೂಲನಿವಾಸಿಗಳ ಸಂಘಟನೆಯ ತಾರಮೋಹನ, ಸಾಹಿತಿ ಡಾ. ಮೀನಾಕ್ಷಿ ಬಾಳಿ ಮತ್ತಿತರ ಗಣ್ಯರು ಪಾಲ್ಗೊಳ್ಳುವರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ, ಶಿಷ್ಯವೇತನ, ಎಸ್ಟಿಪಿ ಟಿಎಸ್ಪಿ ಅನುದಾನ ಬಳಕೆ ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚಿಂತನೆ ನಡೆಯುವುದು ಎಂದು ಬಾಬುರಾವ್ ಪಾಸ್ವಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಶಾಲಿವಾನ ಬಡಿಗೇರ, ಕಾರ್ಯಧ್ಯಕ್ಷ ಕಲ್ಯಾಣರಾವ ಭೋಸ್ಲೆ, ಮಹಾಪ್ರಧಾನ ಕಾರ್ಯದರ್ಶಿ ಅಂಬಾದಾಸ ಗಾಯಕವಾಡ, ಖಜಾಂಚಿ ರಘುನಾಥ ಗಾಯಕವಾಡ, ಅನೀಲಕುಮಾರ ಬೆಲ್ದಾಲ್, ಸುಬ್ಬಣ್ಣ ಕರಕನಳ್ಳಿ ಮತ್ತಿತರರು ಇದ್ದರು.




