
Crime
ಖಾತೆ ಮರು ಹಂಚಿಕೆ ಮಾಡಿದ ಸಿಎಂ
ಬೆಂಗಳೂರು,ಜ.22:- ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ಉಂಟಾದ ಅಸಮಾಧಾನ ಕೊನೆಗೊಳಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ ನಾಲ್ವರು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ಸಚಿವ ಎಂಟಿಬಿ ನಾಗರಾಜ ಅವರು ಅಬಕಾರಿ ಖಾತೆ ಒಲ್ಲೆ ಎಂದಿದ್ದರು. ಹೀಗಾಗಿ ಎಂಟಿಬಿ ಅವರಿಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಕೆ. ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ. ಆರ್. ಶಂಕರ್ ಅವರಿಗೆ ತೋಟಗಾರಿಕೆ ಮತ್ತು ರೇಷ್ಮೆ, ಡಾ. ಕೆ.ಸಿ. ನಾರಾಯಣಗೌಡ ಅವರಿಗೆ ಕ್ರೀಡೆ, ವಕ್ಫ್ ಜೊತೆಗೆ ಹೆಚ್ಚುವರಿಯಾಗಿ ಯೋಜನೆ, ಸಾಂಖ್ಯಿಕ ಅಂಕಿಅಂಶ ಖಾತೆ ನೀಡಲಾಗಿದೆ.




