MadikeriKodagu

ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಆಚರಣೆ

ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಆಚರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯ ವಿವಿದ ಮಸೀದಿಗಳಲ್ಲಿ ನಮಾಝ್ ಮತ್ತು ವೀಶೇಷ ಪ್ರವಚನ ನೀಡಲಾಯಿತು.


ತ್ಯಾಗ ಬಲಿದಾನ, ಮತ್ತು ಸಹನೆಯ ಪ್ರತೀಕರಾಗಿದ್ದ ಪ್ರವಾದಿ ಇಬ್ರಾಹಿಮರ ಚರಿತ್ರೆ ಮಾನವ ಕುಲಕ್ಕೆ ಮಾದರಿ.. ಏಕ ದೇವತ್ವದ ಪ್ರತಪಾಧಕರಾಗಿದ್ದ ಪ್ರವಾದಿ ಇಬ್ರಾಹೀಮರು ತಮ್ಮ ಜೀವನದುದ್ದಕ್ಕೂ ದೇವನ ಸಂಪ್ರೀತಿಗಾಗಿ ಬದುಕಿದ ಸಂತರಾಗಿದ್ದರು.. ಮುದಿ ಪ್ರಾಯದಲ್ಲಿ ನಿರಂತರ ಪ್ರಾರ್ಥನೆಯ ಫಲವಾಗಿ ತನಗೆ ಲಬಿಸಿದ ಪ್ರೀತಿಯ ಪುತ್ರನನ್ನು ಇಸ್ಮಾಯಿಲ್ ರನ್ನು ಅಲ್ಲಾಹನಿಗೆ ಸಮರ್ಪಿಸಲು ಸಿದ್ದರಾದಾಗ ಅಲ್ಲಾಹನು ಅವರ ತ್ಯಾಗವನ್ನು ಮೆಚ್ಚಿ ಬಲಿದಾನದ ಸಂಕೇತವಾಗಿ ಆಡನ್ನು ಬಲಿಯರ್ಪಿಸಲು ಆಜ್ಞಾಪಿಸಿದನು..ಇದರ ಭಾಗವಾಗಿ ಲೋಕಾದ್ಯಾಂತ ವಿಶ್ವಾಸಿಗಳು ಬಲಿಯನ್ನು ನೀಡುತ್ತಾರೆ .ಅಲ್ಲಾಹನಿಗೆ ಪ್ರಾಣಿಯ ರಕ್ತವಾಗಲೀ ಮಾಂಸವಾಗಲೀ ತಲುಪುವುದಿಲ್ಲ ಬದಲಾಗಿ ವಿಶ್ವಾಸಿಗಳ ದೇವನ ನಿಷ್ಠೆಯನ್ನು ಪರೀಕ್ಷಿಸುತ್ತಾನೆ

ವಿಶ್ವಾಶಿಗಳು ಎಂದಿಗೂ ಕೋಮುವಾದಿಗಳಾಗಲು ಸಾದ್ಯವಿಲ್ಲ
ಮಾನವೀಯ ಮೌಲ್ಯಗಳನ್ನು ಕಾಯ್ದುಕೊಳ್ಳುವವರಾಗಿದ್ದಾರೆ
ಪ್ರೀತಿ.ಕಾರುಣ್ಯ ಹಿತ ಚಿಂತನೆ..ಸೇವಾ ಗುಣಗಳನ್ನು ತೋರುವವರಾಗಿದ್ದಾರೆ.


ಇಂದು ಸಮಾಜದಲ್ಲಿ ವ್ಯಾಪಕವಾಗಿರುವ ಪಿಡುಗು
ಮಾದಕ ದ್ರವ್ಯಗಳ ವ್ಯಸನ ಇದರ ದಾಸರಾಗಿರುವ ಯುವಕರನ್ನು ಇದರಿಂದ ವಿಮುಕ್ತಗೊಳಿಸಲು ನಾವು ಪ್ರಯತ್ನ ಮಾಡಬೇಕು..
ಎಂದು ಮಸ್ಜಿದ್ ಉರ್ ರ್ರಹ್ಮಾ ಮಸೀದಿಯ ದರ್ಮಗುರುಗಳಾದ ಜ]ಉಮ್ಮರ್ ಮೌಲವಿಯವರು ಈದುಲ್ ಅಝ್ಜಾ ವಿಶೇಷ ಪ್ರವಚನದಲ್ಲಿ ಆಗ್ರಹಿಸಿದರು..

ವಿಶೇಷ ಸಿಹಿ ಖಾದ್ಯಗಳನ್ನು ನೀಡಿ ಪರಸ್ಪರ ಶುಭ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button